ಹೊಸದಿಗಂತ ವರದಿ,ವಿಜಯಪುರ:
ಜಿಲ್ಲೆಯಲ್ಲಿ ಬ್ಯಾಂಕ್ ವೊಂದರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಧೂಳಖೇಡ ಗ್ರಾಮದಲ್ಲಿರುವ ಭೀಮಾಶಂಕರ ಸಹಕಾರಿ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ ಮಲ್ಲಿಕಾರ್ಜುನ ಹೊನಮಾನೆ, ಲತೀಫ್ ಮಕಾನದಾರ, ಮಾಳಪ್ಪ ಸಲಗರೆ, ನಿತೇಶ ನೀಲವಣಿ, ಹುಲಗಪ್ಪ ಪಾತ್ರೋಟ, ಅಬ್ದುಲ್ ಚೀನಿ ಆರೋಪಿಗಳನ್ನು ಬಂಧಿಸಲಾಗಿದೆ.
ಅಲ್ಲದೇ ಆರೋಪಿಗಳಿಂದ ಹಣ ಹಾಗೂ ಕೃತ್ಯಕ್ಕೆ ಬಳಿಸದ ವಾಹನ ಸೇರಿ 27.15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಬಾಗಲಕೋಟ, ಗದಗ, ಕೊಪ್ಪಳ, ಬೆಳಗಾವಿಯಲ್ಲಿ ಕೇಸ್‌ಗಳಿವೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ಹೇಳಿದ್ದಾರೆ.