ಅಹ್ಮದ್ ನಗರಕ್ಕೆ ‘ಅಹಲ್ಯಾನಗರ’ ಎಂದು ಮರುನಾಮಕರಣ: ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಮಹಾರಾಷ್ಟ್ರದ ‘ಅಹ್ಮದ್ ನಗರಕ್ಕೆ’ ಮರುನಾಮಕರಣ ಮಾಡಲಾಗುತ್ತಿದೆ . ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾಪವನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದರು.

15 ನೇ ಶತಮಾನದಲ್ಲಿ ನಿಜಾಮ್ ಶಾಹಿ ರಾಜವಂಶ ಮತ್ತು ಅಹ್ಮದ್ ನಗರ ಪಟ್ಟಣವನ್ನು ಸ್ಥಾಪಿಸಿದ ಅಹ್ಮದ್ ನಿಜಾಮ್ ಷಾ ಅವರಿಂದ ಅಹ್ಮದ್ ನಗರ ನಗರ ಎಂಬ ಹೆಸರು ಬಂದಿದೆ. ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಗಳಿಗೆ ಮೊಘಲ್ ಚಕ್ರವರ್ತಿಗಳಾದ ಔರಂಗಜೇಬ್ ಮತ್ತು ನಿಜಾಮ್ ಮಿರ್ ಒಸ್ಮಾನ್ ಅಲಿ ಖಾನ್ ಅವರ ಹೆಸರನ್ನು ಇಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!