ಹೆಂಗಳೆಯರ ಬ್ಯೂಟಿ ಹೆಚ್ಚಿಸೋದಕ್ಕೆ ಲಿಪ್‌ಸ್ಟಿಕ್ ಪ್ರಮುಖ ಅಂಶವಾಗಿದೆ. ನಮ್ಮ ಸ್ಕಿನ್‌ಟೋನ್‌ಗೆ ತಕ್ಕಂತಹ ಲಿಪ್ಸ್‌ಟಿಕ್ ಬಳಕೆ ಮಾಡುವುದು. ಸೂಕ್ತ, ಟೋನ್‌ನಲ್ಲಿ ಬದಲಾವಣೆ ಆಗೋದಿಲ್ಲ. ಆದ್ರೆ ಬಣ್ಣದಲ್ಲಿ ಬದಲಾವಣೆ ಮಾಡಬಹುದಲ್ವಾ?
ನಿಮ್ಮ ಮುಖದ ಬಣ್ಣ ತಿಳಿ ಆಗಿದ್ದು, ಫೇರ್ ಸ್ಕಿನ್ ಆದರೆ ನಿಮಗೆ ಯಾವ ಬಣ್ಣದ ಲಿಪ್‌ಸ್ಟಿಕ್ ಕೂಡ ಮ್ಯಾಚ್ ಆಗುತ್ತದೆ. ನ್ಯೂಡ್ ಬಣ್ಣಗಳು ಈಸಿಯಾಗಿ ನ್ಯಾಚುರಲ್ ಕಲರ್ ನೀಡುತ್ತವೆ. ಲೈಟ್ ಪಿಂಕ್ ಹಾಗೂ ಪೀಚ್ ಶೇಡ್ ಬೆಸ್ಟ್ ಆಯ್ಕೆ.
ನೀವು ತುಂಬಾ ಫೇರ್ ಅಲ್ಲ, ಆದರೆ ಗೋಧಿಬಣ್ಣದವರು ಎಂದಾದರೆ ತುಂಬಾ ಲೈಟ್ ಬಣ್ಣದ ಲಿಪ್ಸ್‌ಟಿಕ್ ಆಯ್ಕೆ ಮಾಡಬೇಡಿ. ಬ್ಲಡ್ ರೆಡ್, ಪಿಂಕ್ ಹಾಗೂ ಪೀಚ್ ನಿಮಗೆ ಬೆಸ್ಟ್.
ನೀವು ನಾರ್ಮಲ್ ಇಂಡಿಯನ್ ಬ್ರೌನ್ ಸ್ಕಿನ್‌ನವರಾಗಿದ್ದರೆ ಆದಷ್ಟು ಡಾರ್ಕ್ ಕಲರ್‌ಗಳನ್ನೇ ಚೂಸ್ ಮಾಡಿ. ರೆಡ್, ಮರೂನ್, ಪಿಂಕ್ ಯಾವ ಬಣ್ಣ ಇದ್ದರೂ ಲೈಟ್ ಆಗಿ ಹಚ್ಚಬೇಡಿ. ಎರಡು ಕೋಟ್ ಬಳಕೆ ಮಾಡಿ.
ಬ್ರೌನ್‌ಗಿಂತಲೂ ಡಾರ್ಕ್ ಶೇಡ್ ನಿಮ್ಮದಾಗಿದ್ದರೆ ಬ್ರೌನ್, ಮರೂನ್, ಪರ್ಪಲ್ ಹಾಗೂ ಡಾರ್ಕ್ ಪಿಂಕ್ ಶೇಡ್ ನಿಮಗೆ ಒಪ್ಪುತ್ತದೆ.