ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸೀತಾ ರಾಮಂ’ ಜೋಡಿ ಮತ್ತೆ ಒಂದಾಗಲು ಸಿದ್ಧವಾಗಿದೆ. ನಿರ್ದೇಶಕ ಹನು ರಾಘವಪುಡಿ ಹಾಗೂ ನಾಯಕಿ ಮೃಣಾಲ್ ಠಾಕೂರ್ ಮತ್ತೊಂದು ಚಿತ್ರಕ್ಕೆ ಜೊತೆಯಾಗಲಿದ್ದಾರೆ. ಮೃಣಾಲ್ ಮೊದಲ ಬಾರಿಗೆ ಈ ನಾಯಕನ ಜೊತೆ ಕೆಲಸ ಮಾಡುತ್ತಿರುವುದು ವಿಶೇಷ.
‘ಹಾಯ್ ನಾನ್ನಾ’ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಅವರಿಗೆ ಹೊಸ ಅವಕಾಶ ಸಿಕ್ಕಿದೆ ಆದರೆ ‘ಪುಷ್ಪಾ’ ಚಿತ್ರದ ನಂತರ ಸೂಪರ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಟಿಯರ ಕನಸಾಗಿದೆ. ಮೃಣಾಲ್ಗೆ ಸುವರ್ಣಾವಕಾಶ ಒದಗಿ ಬಂದಿದೆ. ‘ಅನಿಮಲ್‘ ಚಿತ್ರದ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.