ಮೇಷ.
ವೃತ್ತಿಯಲ್ಲಿ ಯಶ. ಎಲ್ಲರು ಮೆಚ್ಚುವ ನಿರ್ವಹಣೆ. ಕುಟುಂಬದ ಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ತುಸು ಬೇಸರದ ಭಾವ ಆವರಿಸಲಿದೆ.
ವೃಷಭ
ಈ ದಿನ ಉತ್ತಮ ಫಲ ತರಲಿದೆ. ಮಹತ್ವದ ನಿರ್ಧಾರ -ಲದಾಯಕ. ಏಕಾಂಗಿಗಳಿಗೆ ಪ್ರೀತಿಯಲ್ಲಿ ಯಶಸ್ಸು. ಉದ್ಯೋಗ ಅವಕಾಶ ಉಜ್ವಲ.
ಮಿಥುನ
ಅದೃಷ್ಟದ ದಿನ. ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯ ತೋರುವಿರಿ. ವಿವಾಹಕಾಂಕ್ಷಿಗಳಿಗೆ ಸಂಗಾತಿ ಹುಡುಕಾಟ ಸಫಲವಾಗಲಿದೆ.
ಕಟಕ
ಕೆಲಸ ಸಾಧಿಸಲು ಹೆಚ್ಚಿನ ಪ್ರಯತ್ನ ಬೇಕು. ಆರ್ಥಿಕ ಉನ್ನತಿಯ ದಾರಿ ತೋರಲಿದೆ. ಪ್ರೀತಿಯಲ್ಲಿ ಹಿನ್ನಡೆ ಉಂಟಾದೀತು. ಆರ್ಥಿಕ ಅಡಚಣೆ.
ಸಿಂಹ
ತಾಳ್ಮೆಯಿಂದ ವ್ಯವಹರಿಸಿ. ಎಲ್ಲ ಕಾರ್ಯ ಸುಲಲಿತವಾಗಿ ಸಾಗಲಿದೆ. ಆರ್ಥಿಕವಾಗಿ ಮಹತ್ವದ ನಿರ್ಣಯ ಇಂದು ತಾಳಬೇಡಿ. ಸ್ವಲ್ಪ ಕಾಯಿರಿ.
ಕನ್ಯಾ
ಕೈಗೆ ಎಟುಕದ ಆಕಾಂಕ್ಷೆ ಇರಿಸಿಕೊಳ್ಳದಿರಿ. ನಿಮ್ಮ ಮಿತಿಯಲ್ಲೆ ವ್ಯವಹರಿಸಿ. ಸಂಗಾತಿ ಜತೆ ಆತ್ಮೀಯವಾಗಿ ವರ್ತಿಸಿ. ಕೋಪತಾಪ ಸಲ್ಲದು.
ತುಲಾ
ಕೌಟುಂಬಿಕ ಸಮ್ಮಿಲನ. ವ್ಯವಹಾರದಲ್ಲಿ ಯಶಸ್ಸು. ಇತರರ ಚುಚ್ಚುಮಾತಿಗೆ ತಲೆ ಕೆಡಿಸಿಕೊಳ್ಳದಿರಿ. ಆರ್ಥಿಕ ಒತ್ತಡ ಅಧಿಕ.
ವೃಶ್ಚಿಕ
ವೃತ್ತಿ ಸಂಬಂಧ ದೂರ ಪ್ರಯಾಣ ಸಾಧ್ಯತೆ. ಕಾರ್ಯ ಸಫಲ. ಸಾಂಸಾರಿಕ ಒತ್ತಡ ಹೆಚ್ಚು. ಧಾರ್ಮಿಕ ಚಟುವಟಿಕೆಯಿಂದ ಮನಸ್ಸಿಗೆ ನಿರಾಳತೆ.
ಧನು
ವಿಶ್ವಾಸ ವೃದ್ಧಿಯ ದಿನ. ಕಠಿಣ ಕಾರ್ಯವೂ ಇಂದು ಸುಗಮವಾಗಿ ಸಾಗಲಿದೆ. ಹಣ ಗಳಿಕೆ. ಸಾಂಸಾರಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.
ಮಕರ
ಬಿಕ್ಕಟ್ಟು ಉಂಟಾದರೆ ಕ್ಷಿಪ್ರವಾಗಿ ಕಾರ್ಯಾಚರಿಸಿ. ಗುರಿ ಸಾಧನೆ ನಿಮಗೆ ಕಷ್ಟವಲ್ಲ. ಆದರೆ ಹಲವರ ವಿರೋಧ ಕಟ್ಟಿಕೊಳ್ಳುವಿರಿ. ತುಸು ಆರ್ಥಿಕ ನಷ್ಟ.
ಕುಂಭ
ಹಣ ಗಳಿಕೆಯಲ್ಲಿ ಹೆಚ್ಚಳ. ಕಠಿಣ ಪರಿಸ್ಥಿತಿ ಎದುರಿಸಿದರೂ ಆಪ್ತರಿಂದ ಬೆಂಬಲ ಪಡೆಯುವಿರಿ. ಹಿರಿಯರಿಗೆ ಬೆನ್ನು ನೋವಿನಿಂದ ನಿರಾಳತೆ.
ಮೀನ
ಅದೃಷ್ಟದ ದಿನ. ನೀವು ಬಯಸಿದ ಪ್ರಗತಿ ಸಾಧಿತ. ಮನೆಯಲ್ಲಿ ಹೆಚ್ಚು ಹೊಣೆಗಾರಿಕೆ. ದೈಹಿಕ ಬಸವಳಿಕೆ ಕಾಡಬಹುದು. ವಿಶ್ರಾಂತಿಗೆ ಗಮನಕೊಡಿ.



