ಮೇಷ
ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪ್ರಮುಖ ಕಾರ್ಯ ಕೂಡಲೇ ಆರಂಭಿಸಿ. ಮೀನಮೇಷ ಬೇಡ.
ವೃಷಭ
ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಒಳಿತಿಗೆ ಕಾರಣವಾಗದು. ಅಡ್ಡಿ ಒದಗಬಹುದು. ಉದ್ಯೋಗದ ಒತ್ತಡ ಹೆಚ್ಚು. ಪ್ರೀತಿಯ ವಿಷಯದಲ್ಲಿ ನಿರಾಶೆ.
ಮಿಥುನ
ಕೆಲ ದಿನಗಳಿಂದ ಕಾಡುತ್ತಿರುವ ಆತಂಕ ನಿವಾರಣೆ. ಸಮಸ್ಯೆಗೆ ಪರಿಹಾರ
ಕಟಕ
ಖಾಸಗಿ ಬದುಕು ಮತ್ತು ವೃತ್ತಿ ಬದುಕು ಎರಡರಲ್ಲೂ ನಿಮಗಿಂದು ಫಲಪ್ರದ ದಿನ. ಕಾರ್ಯಸಿದ್ಧಿ. ಕೌಟುಂಬಿಕ ಬೇಡಿಕೆ ಈಡೇರುವುದು. ಸಿಗುವುದು. ಆಪ್ತ ಬಂಧುಗಳಿಂದ ಉತ್ತಮ ಸಹಕಾರ. ಆರ್ಥಿಕ ಉನ್ನತಿ.
ಸಿಂಹ
ಅನಿರೀಕ್ಷಿತ ಬೆಳವಣಿಗೆ ನಿಮ್ಮ ಯೋಜನೆ ಹಾಳು ಮಾಡಬಹುದು. ಆರ್ಥಿಕ ಗಳಿಕೆಗೆ ಹಿನ್ನಡೆ ಉಂಟಾದೀತು. ಆರೋಗ್ಯದ ಕುರಿತು ತುಸು ಎಚ್ಚರದಿಂದಿರಿ.
ಕನ್ಯಾ
ವೈಯಕ್ತಿಕ ಬದುಕಲ್ಲಿ ನಿಮಗೆ ಪೂರಕವಾಗಿ ಬೆಳವಣಿಗೆ ಸಂಭವಿಸುವುದು. ಬಂಧುಗಳಿಂದ ಸಹಕಾರ. ಮನೋಕ್ಲೇಷ ನಿವಾರಣೆ.
ತುಲಾ
ಕಾರ್ಯದಲ್ಲಿ ವಿಘ್ನಗಳು. ಉದ್ಯೋಗದಲ್ಲಿ ಒತ್ತಡ. ಪ್ರತಿ ಕೆಲಸವೂ ಯಶಸ್ವಿಯಾಗಲು ಹೆಚ್ಚುವರಿ ಶ್ರಮ ಹಾಕಬೇಕಾಗುವುದು. ಕೌಟುಂಬಿಕ ಅತೃಪ್ತಿ.
ವೃಶ್ಚಿಕ
ನಿಮ್ಮ ಇಷ್ಟದ ಉದ್ಯೋಗ ಸಿಗುವ ಅವಕಾಶ ಲಭ್ಯವಾದೀತು. ಉದ್ಯೋಗಿಗಳಿಗೆ ಹೊಸ ಸ್ನೇಹ. ಇದರಿಂದ ಇಂದಿನ ನಿಮ್ಮ ದಿನ ಸುಂದರವಾಗಲಿದೆ.
ಧನು
ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸಲೀಸು. ಕೌಟುಂಬಿಕ ಸಾಮರಸ್ಯ ಹೆಚ್ಚಳ. ಅಧಿಕ ಹೊರೆಯಿಂದ ಮಾನಸಿಕ ಒತ್ತಡ. ಕೌಟುಂಬಿಕ ಸಂತೋಷ, ಸಮಾಧಾನ.
ಮಕರ
ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ಸಿಗುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಬಂಧುಗಳಿಂದ ಕಿರಿಕಿರಿ ಅನುಭವಿಸುವಿರಿ.
ಕುಂಭ
ಸಂಬಂಧವನ್ನು ನೀವೇ ನಿರ್ಧರಿಸುವ ರೀತಿ ವರ್ತಿಸಬೇಡಿ. ಇತರರ ಭಾವನೆಗೂ ಬೆಲೆ ಕೊಡಿ. ಆರೋಗ್ಯಕ್ಕೆ ಹಾನಿಕರವಾದ ಚಟುವಟಿಕೆ ನಿಲ್ಲಿಸಿ.
ಮೀನ
ಏರುಪೇರುಗಳ ದಿನ. ಕೆಲವು ಉದ್ದೇಶ ಈಡೇರುವುದು. ಕೆಲವು ಕಾರ್ಯ ಸಾಧ್ಯವಾಗದೆ ಉಳಿಯುವುದು. ಕೌಟುಂಬಿಕವಾಗಿಯೂ ಮಿಶ್ರ ಫಲದ ದಿನ.