ಸಂಘ ಶಿಕ್ಷಾ ವರ್ಗ: ಹೊಸ ಪಠ್ಯಕ್ರಮ ಸೇರ್ಪಡೆಗೆ ಅಖಿಲ ಭಾರತೀಯ ಪ್ರತಿನಿಧಿ ಸಭೆ ನಿರ್ಧಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಹೊಸ ಪಠ್ಯಕ್ರಮವನ್ನು ಸೇರಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಹ ಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಹೇಳಿದ್ದಾರೆ.

ಈ ಹಿಂದೆ ಸಂಘ ಶಿಕ್ಷಾ ವರ್ಗದ ಸಂಯೋಜನೆಯಲ್ಲಿ ಮೊದಲು 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ, 20 ದಿನಗಳ ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗ, 20 ದಿನಗಳ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗ ಮತ್ತು ನಾಗಪುರದಲ್ಲಿ ನೆಡೆಯುತ್ತಿದ್ದ ತೃತೀಯ ವರ್ಷ ಸಂಘ ಶಿಕ್ಷಾ ವರ್ಗ 25 ದಿನಗಳ ಕಾಲ ನಡೆಯುತ್ತಿದ್ದವು.

ಈಗ ಹೊಸ ಪಠ್ಯಕ್ರಮದಲ್ಲಿ ಮೊದಲು 3 ದಿನಗಳ ಪ್ರಾರಂಭಿಕ ವರ್ಗ, ನಂತರ 7 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗ ಇರುತ್ತದೆ. ಇದರ ನಂತರದಲ್ಲಿ 15 ದಿನಗಳ ಸಂಘ ಶಿಕ್ಷಣ ವರ್ಗ, 20 ದಿನಗಳ ಕಾರ್ಯಕರ್ತ ವಿಕಾಸ ವರ್ಗ -1 ಮತ್ತು 25 ದಿನಗಳ ಕಾರ್ಯಕರ್ತ ವಿಕಾಸ ವರ್ಗ 2 ಕ್ರಮವಾಗಿ ಇರುತ್ತದೆ. ಈ ತರಗತಿಗಳು ವಿಶೇಷ ಪ್ರಾಯೋಗಿಕ ತರಬೇತಿಯನ್ನು ಸಹ ಒಳಗೊಂಡಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!