ಲೋಕಸಭಾ ಕುರುಕ್ಷೇತ್ರ: ಇಂದು ಕಲಬುರಗಿಗೆ ನಮೋ ಭರ್ಜರಿ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಕುರುಕ್ಷೇತ್ರಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು ಪ್ರಧಾನಿ ಮೋದಿ ಕಲಬುರಗಿಗೆ ಕಾಲಿಟ್ಟಿದ್ದಾರೆ.

ಇಂದು ಮಧ್ಯಾಹ್ನ ಮೂರು ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗಲಿದೆ. ಈ ನಡುವೆ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.

ಇಂದು ಮಧ್ಯಾಹ್ನ ಒಂದು ಗಂಟೆಗೆ ಸೇನಾ ಹೆಲಿಕಾಪ್ಟರ್ ಮೂಲಕ ಡಿಎಆರ್ ಎಲಿಪ್ಯಾಡ್‌ನಲ್ಲಿ ಮೋದಿ ಲ್ಯಾಂಡ್ ಆಗಲಿದ್ದಾರೆ. ಡಿಎಆರ್ ಮೈದಾನದಿಂದ ಎನ್.ವಿ. ಮೈದಾನದವರೆಗೆ ರೋಡ್ ಶೋ ನಡೆಯಲಿದೆ.

ಮಧ್ಯಾಹ್ನ ಎರಡು ಗಂಟೆಗೆ ಕಾರ್ಯಕ್ರಮದಲ್ಲಿ ಅಂದಾಜು ಎರಡು ಲಕ್ಷ ಜನ ಸೇರಲಿದ್ದಾರೆ. ಇದಕ್ಕಾಗಿ ಈಗಾಗಲೇ ಎಲ್ಲ ತಯಾರಿ ಮಾಡಲಾಗಿದೆ. ಇಂದು ಎಲೆಕ್ಷನ್ ದಿನಾಂಕ ಪ್ರಕಟವಾಗಲಿದ್ದು, ನೀತಿ ಸಂಹಿತೆ ಜಾರಿಗೆ ಕೆಲವೇ ಸಮಯ ಇರುವಾಗ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಇಡೀ ದೇಶದ ಕಣ್ಣು ಅವರ ಮೇಲಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!