ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಳಿಂದ ಟ್ರೋಫಿಗಾಗಿ ಹಪಹಪಿಸುತ್ತಿದ್ದ ಆರ್‌ಸಿಬಿ ಕಡೆಗೂ ಕಪ್ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರೀ ಆರ್‌ಸಿಬಿ ರಾರಾಜಿಸುತ್ತಿದೆ.
ಈ ಮಧ್ಯೆ ಆರ್‌ಸಿಬಿ ಮಾಡಿದ ಪೋಸ್ಟ್ ಒಂದು ವಿರಾಟ್ ಕೊಹ್ಲಿ ಪರ್ಸನಲ್ ಪೋಸ್ಟ್‌ನ್ನು ಹಿಂದಿಕ್ಕಿದೆ. ಯಾವ ಪೋಸ್ಟ್ ಗೊತ್ತಾ?
ವಿರಾಟ್ ಕೊಹ್ಲಿ ಎರಡನೇ ಮಗುವಿಗೆ ತಂದೆಯಾಗಿದ್ದೇನೆ, ಮಗುವಿನ ಹೆಸರು ಅಕಾಯ್ ಎಂದು ಮಾಡಿದ್ದ ಪೋಸ್ಟ್ ಮಾಡಿದ 10 ಮಿನಿಷದಲ್ಲಿ 10ಲಕ್ಷ ಲೈಕ್ಸ್ ಪಡೆದಿತ್ತು.
ಇದೀಗ ಆರ್‌ಸಿಬಿ ಗೆಲುವಿನ ಪೋಸ್ಟ್ ಮಾಡಿದ್ದು, ಕೇವಲ 9 ನಿಮಿಷಕ್ಕೆ 10ಲಕ್ಷ ಲೈಕ್ಸ್ ಪಡೆದು ಕೊಹ್ಲಿ ಪೋಸ್ಟ್ ಹಿಂದಿಕ್ಕಿದೆ.