ಅರೆ ಬೆತ್ತಲಾಗಿ ಜಿಯೋ ಟವರ್ ಏರಿ ಹುಚ್ಚಾಟ ಮೆರೆದ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಅರೆಬೆತ್ತಲೆಯಾಗಿ ಟವರ್ ಏರಿದ ಘಟನೆ ನಡೆದಿದೆ.

ಯುವಕನೊಬ್ಬ ಟವರ್ ಮೇಲೆ ನಿಂತು ಹುಚ್ಚಾಟ ನಡೆಸುತ್ತಿರುವ ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆದರೆ ಯುವಕ ಯಾರು, ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ಇನ್ನು ತಿಳಿದು ಬಂದಿಲ.

ಕಳೆದ 6 ತಿಂಗಳ ಹಿಂದೆ ಸಿಂದಗಿ ತಾಲೂಕಿನಲ್ಲಿ ಎರಡು ಬಾರಿ ಟವರ್ ಹತ್ತಿ ಹುಚ್ಚಾಟ ಮಾಡಿದ್ದ ಕುಡುಕ. ಮತ್ತೆ ಟವರ್​ ಏರಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನು ಕೆಳಗೆ ಇಳಿಸೋಕೆ ಹರಸಾಹಸ ಪಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!