ಮದುವೆಯಾಗಿ ವರ್ಷದಲ್ಲೇ ಮಗಳು ಸಾವು, ಬೀಗರ ಮನೆಗೆ ಬೆಂಕಿ ಇಟ್ಟ ಪೋಷಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದಲ್ಲಿ ಮಗಳ ಅತ್ತೆ ಮನೆಗೆ ಪೋಷಕರು ಬೆಂಕಿ ಇಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಮಗಳಾದ ಅಂಶಿಕಾ ಕೇಸರವಾಣಿಯನ್ನು ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದರು. ಗಂಡನ ಮನೆಯಲ್ಲಿ ವರದಕ್ಷಿಣೆಗೆ ಕಿರುಕುಳ ನೀಡಿದ್ದು, ಬೇಸತ್ತು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಂಶಿಕಾ ಪೋಷಕರು ಆರೋಪಿಸಿದ್ದಾರೆ.

ಎರಡೂ ಮನೆಯವರ ನಡುವೆ ಜಗಳ ನಡೆಯುತ್ತಿದ್ದ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟ್ರೊಳಗೆ ಅಂಶಿಕಾ ಪೋಷಕರು ಆಕೆಯ ಅತ್ತೆ ಮನೆಗೆ ಬೆಂಕಿ ಇಟ್ಟಿದ್ದರು. ಇದರಿಂದಾಗಿ ಅಂಶಿಕಾ ಅತ್ತೆ ಹಾಗೂ ಮಾವ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!