ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೊಚ್ಚಿ ವಲಯದ ಜಾರಿ ನಿರ್ದೇಶನಾಲಯ ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮದ್ ಹಫೀಜ್‌ಗೆ ಸಂಬಂಧಪಟ್ಟ ಕರ್ನಾಟಕ, ಕೇರಳ ಹಾಗೂ ಗೋವಾದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ.
ಶೋಧ ಕಾರ್ಯದ ವೇಳೆ 1 ಕೆಜಿ 672 ಗ್ರಾಂ ಚಿನ್ನ, 12 ಲಕ್ಷ ಮೌಲ್ಯದ 7 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಅದರೊಂದಿಗೆ ಬ್ಯಾಂಕ್ ಖಾತೆಗಳಲ್ಲಿದ್ದ 4.4 ಕೋಟಿ ಹಣವನ್ನು ಇಡಿ ಫ್ರೀಜ್ ಮಾಡಿದೆ. ಅದರೊಂದಿಗೆ ವಿವಿಧ ದಾಖಲೆಗಳನ್ನೂ ಇಡಿ ವಶಪಡಿಸಿಕೊಂಡಿದೆ.
ಈ ವೇಳೆ ಕರ್ನಾಟಕ ವಿಧಾನಸಭೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕರಾಗಿರುವ ಎನ್‌ಎ ಹ್ಯಾರಿಸ್ ಅವರಿಗೆ ನೀಡಲಾದ ಅಧಿಕೃತ ಪ್ರೋಟೋಕಾಲ್ ಸ್ಟಿಕ್ಕರ್ ಪತ್ತೆಯಾಗಿದೆ. ಕರ್ನಾಟಕ ವಿಧಾನಸಭೆಯಿಂದ ಶಾಸಕರಿಗೆ ನೀಡಿರುವ ಸ್ಟಿಕ್ಕರ್ ಇದಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ, ಎನ್‌ಎ ಹ್ಯಾರಿಸ್ ಅವರ ಪುತ್ರನಾಗಿರುವ ಮೊಹಮದ್ ನಲಪಾಡ್ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದು, ಅದನ್ನು ಎನ್‌ಎ ಹ್ಯಾರಿಸ್ ಅವರ ಆಪ್ತ ಸಂಬಂಧಿಯಾಗಿರುವ ನಫೀಹಾ ಮೊಹಮದ್ ನಾಸಿರ್ ಹೆಸರಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ.
ದಾಳಿಗೊಳಗಾದ ಮೊಹಮ್ಮದ್ ಹಫೀಜ್ ನಲಪಾಡ್ ಆಪ್ತ ಸ್ನೇಹಿತ ಎಂದೂ ಇಡಿ ತಿಳಿಸಿದೆ.
ಮಾರ್ಚ್ 14, 15 ಹಾಗೂ 16 ರಂದು ಮೊಹಮದ್ ಹಫೀಜ್ ಹಾಗೂ ಇತರರ ವಿರುದ್ಧ ದಾಳಿ ನಡೆದಿತ್ತು.