ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಭಾವ ಕಾಡುತ್ತಿದ್ದು, ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಜನರು ಒತ್ತಾಯಿಸಿದ್ದರು.
ಆದರೆ ಕ್ರೀಡಾಭಿಮಾನಿಗಳು ಬೆಂಗಳೂರಿನಲ್ಲಿಯೇ ಪಂದ್ಯ ನಡೆಯಲಿ, ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದರು. ಇದೀಗ ಜಲಮಂಡಳಿ ಇದಕ್ಕೆ ಉಪಾಯ ಹುಡುಕಿದ್ದು, ಸಂಸ್ಕರಿಸಿದ ನೀರನ್ನು ಸ್ಟೇಡಿಯಂಗೆ ಬಳಕೆ ಮಾಡುತ್ತೇವೆ ಎಂದು ಹೇಳಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಂದ್ಯಾವಳಿಗೆ ಅಗತ್ಯವಿರುವ ಸಂಸ್ಕರಿಸಿದ ನೀರನ್ನು ಒದಗಿಸುವುದಾಗಿ ಹೇಳಿದೆ. ಈ ವಿಷಯ ಕೇಳಿ ಕ್ರೀಡಾಭಿಮಾನಿಗಳು ಖುಷಿ ಪಟ್ಟಿದ್ದಾರೆ. ಪಂದ್ಯದ ವೇಳೆ ಸ್ಟೇಡಿಯಂಗೆ ಸುಮಾರು 75,000 ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಸುತ್ತೇವೆ ಎಂದು ಭರವಸೆ ನೀಡಿದೆ.