ಚುನಾವಣೆ ಘೋಷಣೆಗೂ ಮುನ್ನವೇ ‘ದೇವರ ಸ್ವಂತ ನಾಡಿಗೆ’264 ಕೋಟಿ ರೂ. ಹವಾಲಾ ಹಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇರಳ ರಾಜ್ಯಕ್ಕೆ ಬರೋಬ್ಬರಿ 264 ಕೋಟಿ ರೂ. ಹವಾಲಾ ಹಣ ಹರಿದುಬಂದಿರುವ ಶಂಕೆಯಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಲೋಕಸಭಾ ಚುನಾವಣೆ ಸಂದರ್ಭ ಅಕ್ರಮವಾಗಿ ಹಣ ಸಾಗಾಟ ನಡೆಸಲು ಅಡೆತಡೆ ಉಂಟಾಗುವ ಹಿನ್ನೆಲೆಯಲ್ಲಿ ಇದಕ್ಕೂ ಪೂರ್ವ ಭಾವಿಯಾಗಿ ಹಣದ ರವಾನೆ ನಡೆದಿದೆ ಎಂದು ವರದಿಗಳು ಹೇಳಿವೆ. ಈ ಹಿನ್ನಲೆಯಲ್ಲಿ ರಾಜ್ಯ ಗುಪ್ತಚರ ವಿಭಾಗದ ಜತೆಗೆ ಕೇಂದ್ರ ಗುಪ್ತಚರ ವಿಭಾಗಗಳೂ ತನಿಖೆ ಆರಂಭಿಸಿದೆ.

ಮೂಲಗಳ ಮಾಹಿತಿ ಪ್ರಕಾರ ಕಾಸರಗೋಡು ಸಹಿತ ಕೇರಳದ ಆರು ಜಿಲ್ಲೆಗಳಿಗೆ ಇತರೆ ರಾಜ್ಯಗಳಿಂದ ಈ ಹಣ ರವಾನೆಯಾಗಿದೆ. ಇನ್ನಷ್ಟು ಹಣ ರಸ್ತೆ ಹಾಗೂ ಸಮುದ್ರ ಮಾರ್ಗವಾಗಿಯೂ ಹರಿದುಬರುವ ಸುಳಿವು ಸಿಕ್ಕಿದ್ದು, ಗಡಿ ಭಾಗದಲ್ಲಿ ಕಟ್ಟೆಚ್ಚರದ ನಡುವೆಯೇ ಕೋಸ್ಟ್ ಗಾರ್ಡ್ ನೆರವಿನಲ್ಲಿ ಜಲಮಾರ್ಗಗಳ ಮೇಲೂ ಈಗ ಹದ್ದಿನಕಣ್ಣಿರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!