ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2023ರಲ್ಲಿ ನಡೆಸಿದ ಎಂಡಿಎಸ್ ಪರೀಕ್ಷೆಯಲ್ಲಿ ಮಂಗಳೂರಿನ ಡಾ.ಸಿರಿ ಪಾರ್ವತಿ ಬೀಡುಬೈಲು ರಾಜ್ಯಕ್ಕೆ ಪ್ರಥಮ ರ್ಯಾಂಕಿನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ 26ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಡಾ.ಸಿರಿ ಪಾರ್ವತಿ ಪದಕ ಸ್ವೀಕರಿಸಿದರು.
ಹಾಸನದ ಶ್ರೀ ಹಾಸನಾಂಬ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು ಶೇ. 81.29 ಶೇಕಡ ಅಂಕಗಳೊಂದಿಗೆ ರ್ಯಾಂಕ್ ಗಳಿಸಿದ್ದಾರೆ. ಅವರು ಈ ಹಿಂದೆ ಪದವಿಯಲ್ಲಿ ಬಿಡಿಎಸ್ ವ್ಯಾಸಂಗದಲ್ಲಿ ಮಂಗಳೂರಿನ ಎ.ಜೆ. ಡೆಂಟಲ್ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ವಿದ್ಯಾರ್ಥಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಡಾ.ಸಿರಿ ಪಾರ್ವತಿ, ನಿವೃತ್ತ ಉಪನ್ಯಾಸಕ ಪ್ರೊ. ಬೀಡುಬೈಲು ಗಣಪತಿ ಭಟ್ ಮತ್ತು ತ್ರಿವೇಣಿ ದಂಪತಿಯ ಪುತ್ರಿ. ಡಾ. ಅಶ್ವಿನ್ ಪರಕ್ಕಜೆ ಅವರ ಪತ್ನಿ. ಪ್ರಸ್ತುತ ಬೆಂಗಳೂರಿನ ದಯಾನಂದ ಸಾಗರ ದಂತ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ