ಪ್ರಧಾನಿ ನರೇಂದ್ರ ಮೋದಿ ಕಡೆಯಿಂದ ಎಲ್ಲರಿಗೂ ಫ್ರೀ ಐದು ಸಾವಿರ ರೂಪಾಯಿ: ‘ಇದು’ ನಿಮಗೂ ಬಂತಾ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಕಡೆಯಿಂದ ಎಲ್ಲರ ಖಾತೆಗೆ ಐದು ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಈ ಲಿಂಕ್ ಒತ್ತಿ ಎಂಬ ಸಂದೇಶವೊಂದು ಮೋದಿ ಭಾವಚಿತ್ರದೊಂದಿಗೆ ನಿಮ್ಮ ಮೊಬೈಲಿಗೂ ಬಂದಿದೆಯಾ?
ಹುಷಾರಾಗಿರಿ, ಲೋಕಸಭಾ ಚುನಾವಣೆ ನಡುವಲ್ಲಿಯೇ ಸಕ್ರಿಯರಾಗಿರುವ ಸೈಬರ್ ವಂಚಕರು ಇಂತದ್ದೊಂದು ಲಿಂಕನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಯಬಿಡುತ್ತಿದ್ದಾರೆ.

ಈ ವಂಚಕರು ಮೊದಲಿಗೆ ಮೋದಿಯವರ ಕಡೆಯಿಂದ ನೀವು 5,000ರೂ. ಪಡೆದಿದ್ದೀರಿ, ನಿಮ್ಮ ಖಾತೆಗೆ ಈ ಹಣ ಜಮೆ ಮಾಡಲು ಇಲ್ಲಿರುವ ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಖಾತೆಯಲ್ಲಿದ್ದ ಅಷ್ಟೂ ಹಣವನ್ನು ಎಗರಿಸುವಂತೆ ಸಂಚು ರೂಪಿಸುತ್ತಾರೆ. ಇಂತಹಾ ಸಂದೇಶಗಳ ಬಗ್ಗೆ ನಾಗರಿಕರು ಎಚ್ಚರಿಕೆಯಿಂದ ಇರಬೇಕು, ವಂಚಕರು ತಂತ್ರಜ್ಞಾನವನ್ನ ಬಳಸಿಕೊಂಡು ಪ್ರಧಾನಿಗಳ ಫೋಟೋ ಬಳಸಿ ವಂಚಿಸಲು ಮುಂದಾಗಿದ್ದಾರೆ. ಈ ರೀತಿಯ ಮೆಸೇಜ್‌ಗೆ ಯಾರೂ ಸ್ಪಂದನೆ ನೀಡಬೇಡಿ, ವೈಯಕ್ತಿಕ ಒಟಿಪಿಗಳನ್ನ ಹಂಚಿಕೊಳ್ಳಬೇಡಿ, ಅನಾಮಿಕ ಸಂದೇಶಗಳಲ್ಲಿ ಬರುವ ಲಿಂಕ್‌ಗಳನ್ನು ಒತ್ತಬೇಡಿ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!