ಮೇಘನಾ ಶೆಟ್ಟಿ, ಶಿವಮೊಗ್ಗ
ವರ್ಷದೊಳಗಿನ ಮಕ್ಕಳನ್ನು ಹೇಗೆ ಅರ್ಥ ಮಾಡಿಕೊಳ್ಳೋದಕ್ಕೆ ಕಷ್ಟವೋ ಹಾಗೆ ಈ ಟೀನೇಜ್ ಮಕ್ಕಳನ್ನೂ ಅರ್ಥ ಮಾಡಿಕೊಳ್ಳೋದು ಕಷ್ಟ. ಅವರಿಗೆ ಒಂದು ದಿನ ಇಷ್ಟ ಆದ ವಿಷಯ ಮತ್ತೊಂದು ದಿನ ಹಿಡಿಸೋದಿಲ್ಲ. ಮನಸಲ್ಲಿ ಸಾವಿರ ಗೊಂದಲ ಇದ್ರೂ ಮಾತಾಡೋದಿಲ್ಲ. ಇಂಥವರನ್ನು ಅರ್ಥ ಮಾಡ್ಕೊಳ್ಳೋದು ಹೇಗೆ?
ಕೂತು ಮಾತನಾಡಿ
ಮಾತನಾಡಿ ಬಗೆಹರಿಯದ ಸಮಸ್ಯೆ ಎಲ್ಲಿದೆ? ತಮ್ಮ ಜೀವನದಲ್ಲಿ ಏನಾಗ್ತಿದೆ. ಅಪ್ಪ ಅಮ್ಮ ಶತ್ರುಗಳಲ್ಲ ಅವರು ಅರ್ಥ ಮಾಡ್ಕೊಳ್ತಾರೆ ಎಂದು ಮಕ್ಕಳಿಗೆ ಅನಿಸಬೇಕಾದರೆ. ಜಡ್ಜ್ ಮಾಡದೇ ಪ್ರಶ್ನೆ ಕೇಳದೆ ಅವರ ಮಾತನ್ನು ಕೇಳಿಸಿಕೊಳ್ಳಿ.
ಮನೆಯಲ್ಲಿ ಪ್ರೈವೆಸಿ ಇರಲಿ
ನೀವಂದುಕೊಂಡ ಹಾಗೆ ಸಪರೇಟ್ ರೂಮ್ ಕೊಡುವ ಪ್ರೈವೆಸಿ ಅಲ್ಲ. ಮಾತುಗಳಲ್ಲಿ ಪ್ರೈವೆಸಿ ಇರಲಿ. ಹಾರ್ಷ್ ಆದ ಪದಬಳಕೆ, ಕೆಟ್ಟ ಪದಗಳ ಬಳಕೆ, ಫೋನ್ ಚೆಕ್ ಮಾಡುವುದು, ನೀನು ತಪ್ಪು ಎಂದು ದೂಷಿಸುವುದು ಬೇಡ. ನಿಮ್ಮ ಒಪಿನಿಯನ್ ಬದಲು ಫ್ಯಾಕ್ಟ್ಸ್ ನೀಡಿ.
ಒಂಟಿಯಾಗಿ ಬಿಡಬೇಡಿ
ಮಕ್ಕಳು ದೊಡ್ಡವರಾದ್ರು ಇನ್ನೇನು ಅವರನ್ನು ನೋಡ್ಕೋಬೇಕಿಲ್ಲ ಅನ್ಕೋಬೇಡಿ. ನಿಮ್ಮ ಸಾಥ್ ಅವರಿಗೆ ಸದಾ ಬೇಕು. ನಿಮ್ಮ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಅವಕಾಶ ಮಾಡಿಕೊಡಿ. ಮೊಬೈಲ್‌ನಿಂದ ದೂರ ಇದ್ದು, ಒಟ್ಟಿಗೇ ಟ್ರಿಪ್ ಹೋಗೋದು, ಯೋಗ ಮಾಡೋದು ಹೀಗೆ.. ಇದರಿಂದ ನಿಮ್ಮ ಜೊತೆ ಅವರ ಸೇಫ್ ಅಂದುಕೊಳ್ತಾರೆ. ಮಾತುಕತೆ ಹೆಚ್ಚಾಗಿ ಬಾಂಡಿಗ್ ಗಟ್ಟಿಯಾಗುತ್ತದೆ.
ಕುಟುಂಬದ ಜೊತೆ ಲಿಂಕ್ ಇರಲಿ
ನೀವು ನಿಮ್ಮ ಕಸಿನ್ಸ್ ಅಥವಾ ಫ್ಯಾಮಿಲಿ ಡಿನ್ನರ್ ಯಾವುದನ್ನೂ ಸ್ಕಿಪ್ ಮಾಡಲು ಬಿಡಬೇಡಿ. ಎಲ್ಲ ಮೌಲ್ಯಗಳು ಅವರಿಗೆ ಸಿಗಲಿ. ಜಗತ್ತು ವಿಶಾಲವಾಗಿದೆ ಎನ್ನುವುದನ್ನು ಅರಿಯಲಿ. ಐಾರು ಹೇಗೆ ಎಂದು ಜಡ್ಕ್ ಮಾಡುವ ಅಭ್ಯಾಸ ಬರಲಿ.
ಅವರಿಷ್ಟದಂತೆ ನಡೆದುಕೊಳ್ಳಿ
ನೀವು ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ಮೊದಲು ಅವರಿಷ್ಟದಂತೆ ಬಿಟ್ಟುಬಿಡಿ. ನಂತರ ದಾರಿಗೆ ತನ್ನಿ. ಬೇರೆಯವರ ತಪ್ಪನ್ನು ನೋಡಿ ಕಲಿಯೋದು ಜಾಣತನ ಇರಬಹುದು, ಆದರೆ ಸ್ವತಃ ತಪ್ಪು ಮಾಡಿ ಕಲಿತವನಿಗೆ ಜೀವನದ ಪಾಠ ಚೆನ್ನಾಗಿ ಅರ್ಥವಾಗುತ್ತದೆ.
ಈ ತಪ್ಪುಗಳನ್ನು ಮಾಡಬೇಡಿ
ಊಹೆ ಮಾಡಿಕೊಂಡು ಮಾತನಾಡಬೇಡಿ
ಅವರಿಗೆ ಸಿಟ್ಟು ಬಂದಾಗ ನೀವು ಸುಮ್ಮನಿರಿ
ಹಿಟ್ಲರ್ ಆಗಬೇಡಿ
ಮೊಬೈಲ್ ಕಿತ್ತುಕೊಳ್ಳೋದು, ಮನೆಯಲ್ಲೇ ಲಾಕ್ ಮಾಡೋದು ಇದೆಲ್ಲಾ ಬೇಡ
ಮಾತನಾಡುವುದನ್ನು ನಿಲ್ಲಿಸೋದು