ಹೊಸದಿಗಂತ ವರದಿ,ಮಡಿಕೇರಿ:
ಸಮರ್ಪಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.2,92,657 ನ್ನು ಕೊಡಗು-ಮೈಸೂರು ಜಿಲ್ಲೆಗಳ ಗಡಿಭಾಗ ಕುಶಾಲನಗರದ ಚುನಾವಣಾ ವಾಹನ ತಪಾಸಣಾ ಕೇಂದ್ರದಲ್ಲಿ ಗುರುವಾರ ವಶಪಡಿಸಿಕೊಳ್ಳಲಾಗಿದೆ.
ಗಡಿ ಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಒಂದರಲ್ಲಿ ಹಣ ಪತ್ತೆಯಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾ ಅಧಿಕಾರಿ ಪೂವಯ್ಯ ನೇತೃತ್ವದ ತಂಡ ಹಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ.
ತಪಾಸಣಾ ಕೇಂದ್ರದ ತಂಡದ ಸದಸ್ಯರಾದ ಮಹಾದೇವ್, ಅಭಿಷೇಕ್, ಪೊಲೀಸ್ ಅಧಿಕಾರಿ ಸುಬ್ರಮಣಿ ಸಿಬ್ಬಂದಿಗಳಾದ ಸಮಂತ, ಜಯಪ್ರಕಾಶ್ಹಾ ಗೂ ಸತೀಶ್ ಕಾರ್ಯಚರಣೆ ನಡೆಸಿದರು.