ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2024 ರ ಮೊದಲ ಪಂದ್ಯವು ಅನೇಕ ದಾಖಲೆಗಳನ್ನು ಮುರಿದು ವಿಶೇಷ ಸಂದರ್ಭಗಳಿಗೆ ಸಾಕ್ಷಿಯಾಗಿದೆ, ಆದರೆ ಐಪಿಎಲ್ನ ಹಳೆಯ ಆಟಗಾರರಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್ ಅವರು ತಮ್ಮ ಕಿಲ್ಲರ್ ಶಾಟ್ನಿಂದ ಗಮನ ಸೆಳೆದರು.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ವಿಶೇಷ ಶಾಟ್ ಹೊಡೆದಿದ್ದು ಇದೀಗ ವಿಡಿಯೋ ಸಕತ್ ವೈರಲ್ ಆಗಿದೆ.
ಆಟದ 20ನೇ ಓವರ್ನಲ್ಲಿ ದಿನೇಶ್ ಕಾರ್ತಿಕ್ ಅವರು ತುಷಾರ್ ದೇಶಪಾಂಡೆ ಬೌಲಿಂಗ್ನಿಂದ ಚೆಂಡನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್ ನ ತುದಿಗೆ ತಗುಲಿ ನೇರವಾಗಿ ಬೌಂಡರಿ ಗೆರೆ ದಾಟಿತು.
20ನೇ ಓವರ್ ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಶಿಷ್ಟ ಶಾಟ್ ಹೊಡೆದಿದ್ದಾರೆ. ದಿನೇಶ್ ಕಾರ್ತಿಕ್ ಯಾವ ಶಾಟ್ ಆಡಿದರು ಎಂಬುದೇ ಕಾಮೆಂಟೇಟರ್ ಗಳು ಕೆಲಕಾಲ ಗೊಂದಲಕ್ಕೊಳಗಾದರು. ಕ್ರಿಕೆಟ್ ಪುಸ್ತಕಗಳಲ್ಲಿ ಈ ರೀತಿಯ ಶಾಟ್ ಇಲ್ಲ ಎಂದು ಹೇಳಿದ್ದಾರೆ.