ಅಯ್ಯೋ ಇದೆಂಥಾ ಅಭಿಮಾನ, ಕೈ ಮೇಲೆ RCB ಪ್ಲೇಯರ್ಸ್​ ಟ್ಯಾಟೂ! ಈ ಅಭಿಮಾನಕ್ಕೆ ಜನರು ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

RCB ಅಭಿಮಾನಿಗಳು ಸಂಪೂರ್ಣವಾಗಿ ವಿಭಿನ್ನರು. ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ. ಅವರಲ್ಲಿ ಕೆಲವರು ಭಾವೋದ್ರಿಕ್ತ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಅದರಂತೆಯೇ ಇಲ್ಲೊಬ್ಬ ಆರ್​ಸಿಬಿ ಅಪಟ್ಟ ಅಭಿಮಾನಿ ಅವರ ಕೈಯಲ್ಲಿ RCB ಆಟಗಾರರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಆರ್‌ಸಿಬಿ ಮಹಿಳಾ ತಂಡ ಕಪ್ ಗೆದ್ದಿರುವುದು ಗೊತ್ತೇ ಇದೆ. ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ಕೈ ಮೇಲೆ ಮಹಿಳಾ ತಂಡದ ಆಟಗಾರ್ತಿಯರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಬಾರಿ ನಾವು ಕಪ್ ಗೆಲ್ಲುತ್ತೇವೆ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ತಂಡದ 19 ಮಂದಿಯ ಹೆಸರುಗಳನ್ನು ಹಾಕಿಕೊಂಡಿದ್ದಾರೆ.

ಆರ್‌ಸಿಬಿ ಅಭಿಮಾನಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವಾಗಿ ಅಭಿಮಾನಿ ಆರ್‌ಸಿಬಿ ಟಿ-ಶರ್ಟ್‌ ಧರಿಸಿದ್ದು ಕಾಣಬಹುದಾಗಿದೆ. ಇದನ್ನು ನೋಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ವಿಡಿಯೋ ಶೇರ್ ಮಾಡಿದ್ದು, ವಿವಿಧ ಕಮೆಂಟ್ಸ್ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!