ಎಷ್ಟ್ ಟ್ರೈ ಮಾಡಿದ್ರೂ ಅರ್ಥಮಾಡ್ಕೊಳಕ್ಕೇ ಆಗ್ತಿಲ್ಲ. ಈ ಲೈನ್ನ್ನು ಜೀವನದಲ್ಲಿ ಎಷ್ಟು ಬಾರಿ ಬಳಕೆ ಮಾಡಿರ್ತೀರಿ ಅಲ್ವಾ? ಜನರನ್ನು ಅರ್ಥ ಮಾಡಿಕೊಳ್ಳೋಕೆ ಕಷ್ಟ ಅನಿಸಿದ್ರೆ ಹೀಗೆ ಮಾಡಿ ನೋಡಿ..
ಈ ಪ್ರೊಸೆಸ್ ಒಂದು-ಎರಡು ದಿನದ್ದಲ್ಲ, ನಿಮ್ಮ ಸಮಯ ಎನರ್ಜಿ ಕಳೆದುಹೋಗುತ್ತದೆ ಎನ್ನೋದನ್ನು ಅರ್ಥ ಮಾಡಿಕೊಳ್ಳಿ.
ಹಂಗೆ ಅನ್ಕೊಳ್ಬೋದು, ಹಿಂಗೆ ಅನ್ಕೊಳ್ಬೋದು ಅನ್ನೋ ಊಹೆಗಳಿಗೆ ಬ್ರೇಕ್ ಹಾಕಿ.
ಅವರ ಜೊತೆ ಮಾತನಾಡುವ ವೇಳೆ ಸಂಪೂರ್ಣವಾಗಿ ಲಭ್ಯವಿರಿ, ಮಾನಸಿಕ ಹಾಗೂ ದೈಹಿಕವಾಗಿ.
ಅವರ ಜಾಗದಲ್ಲಿ ನಿಂತು ಯೋಚನೆ ಮಾಡೋದನ್ನು ಅಭ್ಯಾಸ ಮಾಡಿ, ನಾನು ಅವರ ಜಾಗದಲ್ಲಿ ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಯೋಚಿಸಿ.
ಅವರ ಬಾಡಿ ಲಾಂಗ್ವೇಜ್ ಬಗ್ಗೆಯೂ ಗಮನ ಇರಲಿ
ಅವರ ಮಾತುಗಳನ್ನು ಜೆನ್ಯೂನ್ ಆಗಿ ಆಲಿಸಿ, ವಾಪಾಸ್ ರಿಪ್ಲೇ ಮಾಡಿ.
ಅವರಿಂದ ಒಳ್ಳೊಳ್ಳೆ ಮಾತುಗಳು ಹೊರಬರುವಂತಹ ಪ್ರಶ್ನೆಗಳನ್ನು ಕೇಳಿ.