KSRTC | ಯುಗಾದಿಗೆ ಊರಿಗೆ ಹೊಗ್ತೀರಾ? ಹಾಗಿದ್ರೆ ಮಿಸ್‌ ಮಾಡ್ದೆ ಇದನ್ನು ಓದಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿ ಯುಗಾದಿ ಹಬ್ಬದ ಜೊತೆ ಸಾಲು ಸಾಲು ರಜೆ ಸೇರಿದ್ದು, ಎಲ್ಲರೂ ತಮ್ಮ ತಮ್ಮ ಊರಿಗೆ ಹೋಗೋ ಪ್ಲಾನ್‌ನಲ್ಲಿದ್ದಾರೆ.

ತಮ್ಮೂರನ್ನು ಬಿಟ್ಟು ಬೆಂಗಳೂರಿಗೆ ಬಂದಿರುವ ಎಷ್ಟೋ ಮಂದಿ ಈ ಸಾಲು ರಜೆಗಳಿಗೆ ಕಾಯುತ್ತಾರೆ. ಇದೀಗ ಅವಕಾಶ ದೊರೆತಿದೆ.

ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ರೈಲು ಟಿಕೆಟ್‌ಗಳು ಬುಕ್‌ ಆಗಿದ್ದು, ಜನ ಬಸ್‌ನಲ್ಲಿ ಓಡಾಟ ನಡೆಸುವ ಬಗ್ಗೆ ಆಲೋಚಿಸಿದ್ದಾರೆ.

ಇದಕ್ಕಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆ ಯುಗಾದಿಗಾಗಿ ಹೆಚ್ಚುವರಿ ಬಸ್‌ ಸೇವೆ ನೀಡಲು ಮುಂದಾಗಿದೆ. ಜನರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಎರಡು ಸಾವಿರಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.

ಕೆಎಸ್‌ಆರ್‌ಟಿಸಿಯಿಂದ 1,750ಬಸ್, NWKSRTCಯಿಂದ 145 ಬಸ್ ಸೇವೆ ಹಾಗೂ ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಬರುತ್ತದೆ. ಸೋಮವಾರ ಒಂದು ದಿನ ರಜೆ ಹಾಕಿ ಹಬ್ಬ ಮುಗಿಸಿಕೊಂಡು ಬರುವ ಪ್ಲಾನ್​ನಲ್ಲಿ ಜನರಿದ್ದಾರೆ.

ಮಂಗಳವಾರ ಯುಗಾದಿ ಹಬ್ಬವಾದರೆ ಒಂದು ದಿನ‌ ಕಳೆದರೆ ಗುರುವಾರ ರಂಜಾನ್ ರಜೆ ಇದೆ. 13 ರಂದು ಎರಡನೇ ಶನಿವಾರ, 14 ರಂದು ಭಾನುವಾರ ರಜೆ ಸಿಗಲಿದೆ. ಏಪ್ರಿಲ್ 7 ರಿಂದ ಏಫ್ರಿಲ್ 14ರವರೆಗೆ ಬರೊಬ್ಬರಿ 5 ರಜೆಗಳು ಸಿಗುತ್ತವೆ. ಹೀಗಾಗಿ ಕೆಲವರು ವಾರಪೂರ್ತಿ ಆಫೀಸ್​ಗೆ ರಜೆ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!