ತಲೆಕೆಳಗಾಗಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾತ್ವಿಕ್‌ ಆರೋಗ್ಯ ಹೇಗಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ರಾಜ್ಯದ ಪ್ರಾರ್ಥನೆಯಂತೆ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕ್‌ ಜೀವಂತವಾಗಿದ್ದಾನೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಾತ್ವಿಕ್‌ ಸಾವನ್ನು ಗೆದ್ದು ಬಂದಿದ್ದಾನೆ.

ಸತತ ಇಪ್ಪತ್ತು ಗಂಟೆಯ ಕಾರ್ಯಾಚರಣೆಯ ನಂತರ ಸಾತ್ವಿಕ್‌ನನ್ನು ಕೊಳವೆ ಬಾಯಿಯಿಂದ ಹೊರತೆಗೆಯಲಾಗಿತ್ತು. ಕೊಳವೆ ಬಾವಿಯಲ್ಲಿ ಸಾತ್ವಿಕ್‌ ತಲೆಕೆಳಗಾಗಿ ಬಿದ್ದಿದ್ದ.

ವಿಜಯಪುರದಲ್ಲಿ ಸಾತ್ವಿಕ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಸಿಟಿ ಸ್ಕ್ಯಾನ್‌ ಸಹಿತ ಇನ್ನಷ್ಟು ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ.

ಎಲ್ಲ ರಿಪೋರ್ಟ್‌ಗಳು ನಾರ್ಮಲ್‌ ಆಗಿದೆ. ಆದರೆ ತಲೆಕೆಳಗಾಗಿ ೨೦ ಗಂಟೆ ಕಳೆದಿರುವ ಕಾರಣ ಸದ್ಯ ಬಾಲಕನನ್ನು ಐಸಿಯುನಲ್ಲಿ ಇಡಲಾಗಿದೆ. ಇನ್ನು ಎರಡು ದಿನಗಳ ಕಾಲ ಬಾಲಕನ ಆರೋಗ್ಯದ ಬಗ್ಗೆ ನಿಗಾ ಇಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!