ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಒಂಟಿ ಮಹಿಳೆಯರನ್ನು ಬೆದರಿಸಿ ಅವರಿಂದ ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳನ್ನು ದೋಚಲು ಸ್ವತಃ ತಾಯಿಯೇ ತನ್ನ ಮಗನಿಗೆ ಮಚ್ಚು, ಚಾಕು ಬಳಸಿ ತರಬೇತಿ ನೀಡಿದ್ದಾಳೆ. ಇದೀಗ ಮಹಿಳೆಯಿಂದ 103 ಗ್ರಾಂ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನಮ್ಮ ದೇಶದಲ್ಲಿ ತಾಯಿಯೇ ಮೊದಲ ಗುರು ಎಂದು ಪೂಜಿಸುವ ಸಂಪ್ರದಾಯವಿದೆ. ತಾಯಿ ತನ್ನ ಮಕ್ಕಳಿಗೆ ಕಲಿಸುವ ಒಳ್ಳೆಯ ಸಂಸ್ಕಾರ ಮಕ್ಕಳು ಕಲಿಯುತ್ತಾರೆ ಅನ್ನೋ ಎಷ್ಟೋ ಮಾತುಗಳನ್ನ ಕೇಳಿರ್ತೀವಿ. ಆದರೆ ತಾಯಿನೇ ತನ್ನ ಮಗನನ್ನು ಸಮಾಜಕ್ಕೆ ಪೂರಕ ವ್ಯಕ್ತಿಯಾಗಿ ಬೆಳೆಸುವ ಬದಲು ಮಾರಕವಾಗುವಂತೆ ಬೆಳೆಸಿದ್ದಾಳೆ.
ಮೂರ್ನಾಲ್ಕು ದಿನ ಕಾದು ಕುಳಿತು ಒಬ್ಬಂಟಿಯಾಗಿ ಯಾವ್ಯಾವ ಮಹಿಳೆಯರು ಬರುತ್ತಾರೆ, ಅವರ ಬಳಿಯಿರುವ ಚಿನ್ನ, ಬೆಳ್ಳಿ ಹಾಗೂ ಹಣ ತೆಗೆದುಕೊಂಡು ಹೋಗುವುದನ್ನು ವಾಚ್ ಮಾಡುತ್ತಿದ್ದ ತಾಯಿ. ನಂತರ ಮಗನಿಗೆ ಮಚ್ಚು, ಚಾಕು ಬಳಸಿ ತರಬೇತಿ ನೀಡಿ, ಒಬ್ಬಂಟಿ ಮಹಿಳೆಯರಿಗೆ ಬೆದರಿಕೆ ಹಾಕಿ ಅವರ ಬಳಿಯಿರುವ ಚಿನ್ನ ಸೇರಿ ಯಾವುದೇ ಬೆಲೆ ಬಾಳುವ ವಸ್ತುಗಳಿದ್ದರೂ ಅದನ್ನು ಕಿತ್ತುಕೊಂಡು ಬರುವಂತೆ ಹೇಳುತ್ತಿದ್ದಳಂತೆ. ಇನ್ನು ತಾಯಿ ಮಾತನ್ನು ಕೇಳುತ್ತಿದ್ದ ಮಗ ಹಲವು ಮಹಿಳೆಯರಿಂದ ಚಿನ್ನ, ಬೆಳ್ಳಿ, ಹಣವನ್ನ ಕದ್ದು ತಂದಿದ್ದು ಇದೀಗ ಅವೆಲ್ಲವನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ.