ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2024 17ನೇ ಋತುವಿನ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಸೋಲಿನ ನಂತರ ಸಿಎಸ್‌ಕೆ ಅಭಿಮಾನಿಗಳು ರುತುರಾಜ್ ಗಾಯಕ್ವಾಡ್ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ. ಕಳಪೆ ನಾಯಕತ್ವದಿಂದಾಗಿ ಸಿಎಸ್‌ಕೆ ಸೋತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೂರುತ್ತಿದ್ದಾರೆ.
ಭಾರತ ತಂಡದ ಮಾಜಿ ಆಟಗಾರರಾದ ಮೊಹಮ್ಮದ್ ಕೈಫ್ ಮತ್ತು ಹರ್ಭಜನ್ ಸಿಂಗ್ ಸಿಎಸ್‌ಕೆ ಅಭಿಮಾನಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಸಿಎಸ್‌ಕೆ ಅಭಿಮಾನಿಗಳ ಈ ದೂರನ್ನ ಗೇಲಿ ಮಾಡಿದ್ದಾರೆ. ಅದು ಕೂಡ ಧೋನಿಯನ್ನು ಮುಂದಿಟ್ಟುಕೊಂಡು ಎಂಬುದು ವಿಶೇಷ.
ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಎರಡು ಪಂದ್ಯಗಳನ್ನು ಗೆದ್ದಾಗ, ಸಿಎಸ್‌ಕೆ ಅಭಿಮಾನಿಗಳು ಧೋನಿಯ ಗರಡಿ ಹುಡುಗ ಎಂದು ಹೊಗಳಿದರು. ಸಿಎಸ್ ಕೆ ತಂಡ ಗೆದ್ದಾಗ ಧೋನಿ ಯುವ ನಾಯಕನನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದರು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತರೆ ನಾಯಕ ರುತುರಾಜ್ ಗಾಯಕ್ವಾಡ್ ನನ್ನ ದೂರುತ್ತಾರೆ. ಹೀಗಾಗಿ ಸಿಎಸ್ ಕೆ ಗೆದ್ದರೆ ಆ ಯಶಸ್ಸು ಧೋನಿಗೆ ಸಲ್ಲುತ್ತದೆ. ಸೋತರೆ ರುತುರಾಜ್ ಗಾಯಕ್ವಾಡ್ ನಾಯಕತ್ವದಿಂದಲೇ ಸೋಲಿಗೆ ಕಾರಣ ಎಂಬ ಸಿಎಸ್ ಕೆ ಅಭಿಮಾನಿಗಳ ದೂರನ್ನು ಮೊಹಮ್ಮದ್ ಕೈಫ್ ಮತ್ತು ಹರ್ಭಜನ್ ಸಿಂಗ್ ಲೇವಡಿ ಮಾಡಿದ್ದಾರೆ.