ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿ ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಬೃಹತ್ ಗಾತ್ರದ ತೇರು ಏಕಾಏಕಿ ಕುಸಿದ ಬಿದ್ದ ಘಟನೆ ನಡೆದಿದೆ.
ತೇರು ಸುಮಾರು 129 ಅಡಿ ಎತ್ತರವಿದ್ದು, ಎತ್ತುಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಿ ಎಳೆಯಲಾಗಿದೆ. ಆ ಕ್ಷಣದಲ್ಲಿ, ಈ ವೇಳೆ ನಿಯಂತ್ರಣ ಕಳೆದುಕೊಂಡು ಎಡಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಹೀಲಲಿಗೆ ಗ್ರಾಮದಿಂದ ಹುಸ್ಕೂರು ಬಳಿ ತೇರು ಬಂದಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನ ಬಳಿ ಬರುತ್ತಿದ್ದಂತೆ ತೇರು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.