ಪ್ರಧಾನಿ ನರೇಂದ್ರ ಮೋದಿ ಇಂದು ಇಡೀ ದೇಶಕ್ಕೆ ಅನಿವಾರ್ಯ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಹೊಸದಿಗಂತ ವಿಜಯಪುರ:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಡೀ ದೇಶಕ್ಕೆ ಅನಿವಾರ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಒಂದು ವಾತಾವರಣ ಇದೆ. ಮೋದಿ ಅವರು ಇಂದು ಅನಿವಾರ್ಯ ಇದ್ದಾರೆ ಎಂದರು. ಮೋದಿ ಅವರನ್ನು ಆಯ್ಕೆ ಮಾಡದೇ ಇದ್ದರೆ ನಾವು ಉಳಿಯುವುದಿಲ್ಲ ಎಂಬ ಭಾವನೆ ದೇಶದ ಜನರಲ್ಲಿ ಬಂದಿದೆ.

ಹೀಗಾಗಿ ಈ ಬಾರಿ 400 ಆಗತ್ತೋ 500 ಕ್ಕೆ ಹೋಗಿ ಹತ್ತತ್ತೋ ಗೊತ್ತಿಲ್ಲ ಎಂದರು. ಕರಾವಳಿ ಭಾಗದಲ್ಲಿ ಮೂರಕ್ಕೆ ಮೂರು ಲೋಕಸಭಾ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ ಎಂದರು.

ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಮತ್ತು ಅವಶ್ಯ ಎಂಬುದು ಸಾಮಾನ್ಯ ಮತದಾರರಿಗೂ ಅನಿಸಿದೆ ಎಂದರು. ಕೆಲ ಕಾರ್ಯಕರ್ತರಲ್ಲಿ ಕೆಲ ವಿಚಾರದಲ್ಲಿ ಅಸಮಾಧಾನ ಇದ್ದರೂ ಸಹ ದೇಶದ ಹಿತ ದೃಷ್ಟಿಯಿಂದ ಎಲ್ಲರೂ ಒಗ್ಗಟಾಗಿ ಬಿಜೆಪಿ ಗೆಲ್ಲಿಸುತ್ತಾರೆ. ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!