ಬಂದೇ ಬಿಡ್ತು ಯುಗಾದಿ ಹಬ್ಬ, ಹೂವು, ಹಣ್ಣಿನ ಬೆಲೆ ಆಗಸದತ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಬ್ಬಗಳ ಸೀಸನ್‌ ಆಗಮಿಸಿದೆ, ಮಂಗಳವಾರ ಹಿಂದೂಗಳ ಹೊಸವರುಷ ಯುಗಾದಿ ಹಬ್ಬ ಆಚರಣೆಗೆ ಎಲ್ಲ ತಯಾರಿಗಳು ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ದರ ದುಬಾರಿಯಾಗಿದೆ.

ಈಗಾಗಲೇ ಬೆಳ್ಳಂಬೆಳಗ್ಗೆಯೇ ಜನ ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ, ಹೂವುಗಳ ಖರೀದಿಯಲ್ಲಿ ತೊಡಗಿದ್ದಾರೆ. ನೀರಿಲ್ಲದ ಕಾರಣ ಹೂವು ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯುತ್ತಿರುವುದು ಕಡಿಮೆಯಾಗಿದೆ.

ಈ ಕಾರಣದಿಂದ ಎಲ್ಲದರ ಬೆಲೆ ಗಗನಕ್ಕೇರಿದ್ದು, ಮಧ್ಯವರ್ಗದ ಜನರಿಗೆ ಹೊಡೆತ ಬಿದ್ದಿದೆ. ಮಲ್ಲಿಗೆ ಹೂವು ಕೆಜಿಗೆ 600 ರೂಪಾಯಿ ದರ ಇದೆ. ಉನ್ನು ಸೇಬು ಇನ್ನಿತರ ಹಣ್ಣುಗಳು 100-250 ರೂಪಾಯಿವರೆಗೂ ಇದೆ. ತರಕಾರಿಗಳ ಬೆಲೆ 40 ರೂಪಾಯಿವರೆಗೂ ಏರಿಕೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!