CINE | ‘ಇಡೀ ವಿಶ್ವ, ದೇಶ ಸುತ್ತಿಬಂದ್ರೂ ನಮ್ಮೂರೇ ನಮಗೆ ಮೇಲೂ’ ಹೀಗಂದಿದ್ಯಾಕೆ ‘TOXIC’ ಯಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಭಾಯ್ ಕನಸಿನ ಚಿತ್ರ ಟಾಕ್ಸಿಕ್ ಶೂಟಿಂಗ್ ಇನ್ನು ಆರಂಬವಾಗಿಲ್ಲ. ಶುರುವಾಗುವ ಮೊದ್ಲೇ ಯಶ್ ಗೋವಾ, ಮುಂಬೈ, ಲಂಡನ್ ಅಂತ ರೌಂಡ್ ಹೊಡೆದು ಬಂದಿದ್ದಾರೆ. ಹೀಗಾಗಿ ಫಾರಿನ್‌ನಲ್ಲೇ ಟಾಕ್ಸಿಕ್ ಶೂಟಿಂಗ್ ಶುರುವಾಗಿದೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಆದರೆ ಈಗ ಎಲ್ಲ ಗಾಳಿ ಸುದ್ದಿಗೆ ನಟ ಯಶ್ ಉತ್ತರ ಕೊಟ್ಟಿದ್ದಾರೆ. ಇಡೀ ವಿಶ್ವ ದೇಶ ಸುತ್ತಿಬಂದ್ರೂ ನಮ್ಮೂರೇ ನಮಗೆ ಮೇಲೂ ಅಂತಾ ಬೆಂಗಳೂರಿನಲ್ಲೇ ಚಿತ್ರೀಕರಣಕ್ಕೆ ಮುಂದಾಗಿದೆ ಚಿತ್ರತಂಡ. ಟಾಕ್ಸಿಕ್ ಸಿನಿಮಾಗಾಗಿ ಬೆಂಗಳೂರಿನಲ್ಲೇ ದುಬಾರಿ ಬಜೆಟ್ ನಲ್ಲಿ ಸೆಟ್ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯುಗಾದಿ ಹಬ್ಬ ಮುಗಿದ ಬಳಿಕ ಬೆಂಗಳೂರಿನಿಂದಲೇ ಟಾಕ್ಸಿಕ್ ಸಿನಿಮಾ ಶೋಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!