ಭಾರತದ ಡಿಜಿಟಲೀಕರಣ ವ್ಯವಸ್ಥೆ ಜಾಗತಿಕ ಸಮುದಾಯಕ್ಕೆ ಮಾದರಿ: ಬೆನ್ತಟ್ಟಿದ ವಿಶ್ವಸಂಸ್ಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಡಿಜಿಟಲೀಕರಣ ವ್ಯವಸ್ಥೆಗೆ ಖುದ್ದು ವಿಶ್ವಸಂಸ್ಥೆ ಮೆಚ್ಚುಗೆ ಸೂಚಿಸಿದೆ. ವಿಶ್ವಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್, ಭಾರತದ ಡಿಜಟಲೀಕರಣ ದೇಶದಲ್ಲಿ ಆರ್ಥಿಕ ವ್ಯವಹಾರ ಹಾಗೂ ಬಡತನ ತಗ್ಗಿಸಲು ನೆರವಾಗಿದೆ. ಇದನ್ನು ಜಾಗತಿಕ ಸಮುದಾಯಕ್ಕೆ ಉದಾಹರಣೆಯಾಗಿ ಹೇಳಬಹುದು ಎಂದಿದ್ದಾರೆ.

ನಾನು ಭಾರತಕ್ಕೆ ಭೇಟಿ ನೀಡಿದ ಪ್ರತೀ ಬಾರಿಯೂ ಆ ದೇಶ ಅಸಾಧಾರಣವಾಗಿ ಕಂಡಿದೆ. ಅಲ್ಲಿನ ಡಿಜಿಟಲೀಕರಣದ ಅಭಿವೃದ್ಧಿ ನನ್ನನ್ನು ಅಚ್ಚರಿಗೀಡುಮಾಡಿದೆ ಎಂದು ಅವರು ಹೇಳಿದ್ದಾರೆ. ಡಿಜಿಟಲೀಕರಣ ಒಂದು ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಇದು ಉತ್ಪಾದಕತೆ ಹೆಚ್ಚಿಸುವ ಜೊತೆಗೆ ವೆಚ್ಚವನ್ನು ತಗ್ಗಿಸುತ್ತದೆ. ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ ಜೊತೆಗೆ ಅಗ್ಗದ ದರದಲ್ಲಿ ವಸ್ತುಗಳ ಲಭ್ಯತೆಗೆ ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡೆನಿಸ್ ಫ್ರಾನ್ಸಿಸ್ ಈ ವರ್ಷ ಜನವರಿ 22ರಿಂದ 26ರವರೆಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ದ್ವಿಪಕ್ಷೀಯ ಮಾತುಕತೆ ಕೂಡಾ ನಡೆಸಿದ್ದರಲ್ಲದೆ, ಜೈಪುರ ಮತ್ತು ಮುಂಬೈಗೂ ಭೇಟಿ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!