ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲು ಅತಿಯಾಗಿದ್ದು, ಪೌರಕಾರ್ಮಿಕರು ವೇತನ ಸಹಿತ ಅರ್ಧದಿನ ರಜೆಗೆ ಆಗ್ರಹಿಸಿದ್ದಾರೆ.
ಕಳೆದ ವಾರದಿಂದ ತೀವ್ರ ಬಿಸಿಲಿದ್ದು, ಕೆಲಸ ಮಾಡಲು ಕಷ್ಟವಾಗುತ್ತಿದೆ, ಸುಸ್ತಾಗುತ್ತಿದೆ, ತಲೆ ತಿರುಗುತ್ತದೆ, ಬಿಸಿಲಿಗೆ ಚರ್ಮದ ಸ್ಥಿತಿ ಹೇಳದಂತಾಗಿದೆ. ಮಾನವೀಯತೆ ನೆಲೆಯಲ್ಲಿ ಕೆಲಸದ ಅವಧಿ ಕಡಿಮೆ ಮಾಡಿ ಎಂದು ಪೌರಕಾರ್ಮಿಕರು ಮನವಿ ಮಾಡಿದ್ದಾರೆ.
ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡರವರೆಗೆ ಕೆಲಸ ಮಾಡುತ್ತೇವೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಮಧ್ಯಾಹ್ನ 11 ರಿಂದ ಮೂರು ಗಂಟೆವರೆಗೆ ಮನೆಯೊಳಗೆ ಇರುವಂತೆ ಸೂಚನೆ ನೀಡಿದೆ. ಹಾಗಾಗಿ ಬೆಳಗ್ಗೆ ಆರರಿಂದ 11 ರವರೆಗೆ ಕೆಲಸ ಮಾಡಿ ಉಳಿದ ಸಮಯ ರಜೆ ನೀಡಿ ಎಂದು ಆಗ್ರಹಿಸಿದ್ದಾರೆ.