ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತೆ ಮಾವನ ಮೇಲಿನ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ.
ದಾವಣಗೆರೆಯ ಅವರಗೊಳ್ಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಸೊಸೆ ರೂಪಾ ಆಸ್ತಿಗಾಗಿ ಈ ರೀತಿ ಮಾಡಿದ್ದಾಳೆ. ಕೆಲ ವರ್ಷಗಳಿಂದ ನಮಗೂ ಆಸ್ತಿಯಲ್ಲಿ ಪಾಲು ನೀಡಿ ಎಂದು ರೂಪಾ ಕೇಳುತ್ತಲೇ ಇದ್ದಳು. ಆದರೆ ಅವರ ಅತ್ತೆ ಮಾವ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಸಿಟ್ಟಿನಲ್ಲಿ ಜೀವನಕ್ಕೆ ಆಧಾರವಾಗಿದ್ದ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆಕೆಯ ಅತ್ತೆ ಮಾವ ದೂರಿದ್ದಾರೆ.
ಸೊಸೆ ರೂಪಾ ನಮ್ಮನ್ನು ಚೆನ್ನಾಗಿ ನೋಡಿಕೊಂಡಿಲ್ಲ. ಹಲ್ಲೆ ಮಾಡಿದ್ದಾಳೆ, ನಮ್ಮ ಬಳಿ ಎಂಟು ಲಕ್ಷ ರೂಪಾಯಿ ಕಿತ್ತುಕೊಂಡು ಮನೆ ಕಟ್ಟಿಸಿಕೊಂಡಿದ್ದಾಳೆ ಆದರೂ ಆಸ್ತಿಗಾಗಿ ಕಿರಿಕ್ ಮಾಡಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.