ಇನ್ನಾದ್ರೂ ಸೀರಿಯಸ್‌ ಆಗಿ.. ರಾಜ್ಯದಲ್ಲಿ 569 ಉಷ್ಣ ಸಂಬಂಧಿ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಡೀ ರಾಜ್ಯ ಪ್ರೆಶರ್‌ ಕುಕ್ಕರ್‌ನಂತಾಗಿದ್ದು, ಬಿಸಿಲಿನ ಧಗೆಗೆ ಒಂದಲ್ಲಾ ಒಂದು ಸಮಸ್ಯೆ ಬರುತ್ತಲೇ ಇದೆ. ಹಿಂದೆಂದೂ ಕಂಡಿರದಷ್ಟು ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿ 569 ಉಷ್ಣ ಸಂಬಂಧಿ ಪ್ರಕರಣಗಳು ದಾಖಲಾಗಿವೆ.

ಬಿಸಿಲಿನಿಂದ ಚರ್ಮದ ಮೇಲೆ ದದ್ದುಗಳು, ಶಾಖದ ಸೆಳೆತ ಪ್ರಕರಣ, ಡೀಹೈಡ್ರೇಷನ್‌ ಹಾಗೂ ಬಿಸಿಲಿನ ಹೊಡೆತ ಪ್ರಕರಣಗಳು ದಾಖಲಾಗಿವೆ. ಈ ಬಾರಿ ಬಿಸಿಲು ತೀಕ್ಷ್ಣವಾಗಿದ್ದು, ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.

ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಬಿಸಿಲಿನಲ್ಲಿ ಓಡಾಟವನ್ನು ಆದಷ್ಟು ಕಡಿಮೆ ಮಾಡಿ, ಇಂಡೋರ್‌ನಲ್ಲಿ ಸಮಯ ಕಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!