ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಜಾಗೃತಿಗಾಗಿ ಸೈಕ್ಲೋಥಾನ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಚುನಾವಣಾ ರಾಯಭಾರಿಯಾದ ಅನುಪ್ ಶ್ರೀಧರ್ ಹಾಗೂ ಇತರೆ ಗಣ್ಯರು ಚಾಲನೆ ನೀಡಿದ್ದಾರೆ.
ನಗರದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ, ಎಲ್ಲರೂ ಬಂದು ಮತದಾನ ಮಾಡಿ ಎಂದು ತಿಳಿಸುತ್ತೇನೆ, ಜಾಗೃತಿಗಾಗಿ 5 ಕಿಲೋಮೀಟರ್ ಸೈಕ್ಲೋಥಾನ್ ಮಾಡಿದ್ದೇವೆ, ನೂರಕ್ಕೂ ಹೆಚ್ಚು ಮಂದಿ ಸೈಕ್ಲಥಾನ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.