ಹೊಸ ದಿಗಂತ ವರದಿ ವಿಜಯಪುರ:
ಗುಮ್ಮಟ ನಗರಿ ಸೇರಿದಂತೆ ಜಿಲ್ಲೆಯ ಕೆಲ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕೆಲ ಹೊತ್ತು ಗುಡುಗು ಮಿಶ್ರಿತ ಧಾರಾಕಾರ ಮಳೆಯಾಗಿದ್ದು, ರಣಭಯಂಕರ ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆಯುಂತಾಗಿದೆ.
ಬೆಳಗ್ಗೆಯಿಂದ ನಗರದಲ್ಲಿ ಬಿಸಿಲು, ಮೋಡ ಮಿಶ್ರಿತ ವಾತಾವರಣವಿದ್ದು, ಮಧ್ಯಾಹ್ನದಲ್ಲಿ ದಟ್ಟ ಮೋಡಕವಿದು ಮಳೆಯಾಗಿದ್ದು, ನಗರದ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವಂತಾಗಿದೆ.
ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಭಾಗದಲ್ಲೂ ಜೋರಾಗಿ ಮಳೆಯಾಗಿದ್ದು, ಇನ್ನು ಇಂಡಿ, ಸಿಂದಗಿ, ಬಸವನಬಾಗೇವಾಡಿ ಸೇರಿದಂತೆ ಇತರೆ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು.