ಚುನಾವಣಾ ಪ್ರಚಾರದ ಭರಾಟೆ ಜೋರು: ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇತ್ತ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಹೇಮಾ ಮಾಲಿನಿಯವರು (Hema Malini) ಮತಯಾಚನೆ ಮಾಡಿರುವ ವೀಡಿಯೋವೊಂದು ವೈರಲ್‌ ಆಗುತ್ತಿದೆ.

ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ ಚುನಾವಣಾ ಪ್ರಚಾರದ ವೇಳೆ ಬಲದೇವ್ ಪ್ರದೇಶದ ಹಯಾತ್‌ಪುರ ಗ್ರಾಮದಲ್ಲಿ ಕೆಲ ಮಹಿಳೆಯರು ಬಿಸಿಲಲ್ಲಿ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದರು. ಗೋಧಿ ಕೊಯ್ಲು ಮಾಡುತ್ತಿರುವ ಮಹಿಳೆಯರನ್ನು ನೋಡಿದ ಹೇಮಾ ಮಾಲಿನಿ, ತನ್ನ ಕಾರನ್ನು ನಿಲ್ಲಿಸಿ ಹೊಲಕ್ಕೆ ಇಳಿದಿದ್ದಾರೆ. ಬಳಿಕ ಮಹಿಳೆಯೊಬ್ಬರ ಕೈಯಿಂದ ಕುಡುಗೋಲು ತೆಗೆದುಕೊಂಡು ಗೋಧಿ ಕೊಯ್ಲು ಮಾಡಿದ’ರು.

ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶೇಕ್‌ಹ್ಯಾಂಡ್ ಕೊಡುವುದರಿಂದ ಹಿಡಿದು ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಿಂದ ನಾನು ನಿಯಮಿತವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಮಾತನಾಡಲು ಇಂದು ನಾನು ಹೊಲಗಳಿಗೆ ಹೋಗಿದ್ದೇನೆ. ಅವರೊಂದಿಗೆ ಕಳೆದ ಸಮಯ ಅತ್ಯಂತ ಖುಷಿ ಕೊಟ್ಟಿತು’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!