ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಈ ಬಸ್ಗಳಲ್ಲಿ ಪ್ರಯಾಣದ ವೇಳೆ ಇನ್ನು ಶೀಘ್ರವೇ ಶುದ್ಧ ನೀರು ಹಾಗೂ ತಿಂಡಿ ಸಿಗಲಿದೆ.
ಹೀಗೊಂದು ನೂತನ ವ್ಯವಸ್ಥೆಗೆ ಸಂಸ್ಥೆಯ ಆಡಳಿತ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ಈ ಯೋಜನೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಸಂಸ್ಥೆ ಹರಾಜಿನ ಮೂಲಕ ಗುತ್ತಿಗೆ ನೀಡಲು ನಿರ್ಧರಿಸಿದೆ. ಈ ಕ್ಷೇತ್ರಗಳಲ್ಲಿ ಅನುಭವ ಇರುವವರನ್ನು ಆಯ್ಕೆ ಮಾಡಲಾಗುತ್ತಿದ್ದು, ತ್ಯಾಜ್ಯ ವಿಲೇ ಹೊಣೆಯನ್ನೂ ಗುತ್ತಿಗೆದಾರರೇ ನಿರ್ವಹಿಸಬೇಕಾಗಿದೆ.
ಆಹಾರದ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಲು ವಿಫಲವಾದರೆ ಗುತ್ತಿಗೆ ರದ್ದು ಮಾಡಲೂ ಸಂಸ್ಥೆ ನಿರ್ಧರಿಸಿದೆ. ಸಂಸ್ಥೆ ಸದ್ಯ ತನ್ನ ಸೂಪರ್ ಫಾಸ್ಟ್ ಬಸ್ಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದೆ.