ಮಕ್ಕಳು ಹಣ್ಣು ತಿನ್ನಲು ಹೆಚ್ಚಾಗಿ ಬಯಸಲ್ಲ. ಆದ್ರೆ ಐಸ್ ಕ್ರೀಂ ಇಷ್ಟಪಟ್ಟು ತಿಂತಾರೆ. ಅವರಿಗೆ ಒಂದು ಕಪ್ ಐಸ್ ಕ್ರೀಮ್ ಸಾಕಾಗುವುದಿಲ್ಲ. ಹೊರಗೆ ನಿತ್ಯವೂ ಐಸ್ ಕ್ರೀಂ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಆತಂಕದಲ್ಲಿರುವ ಪೋಷಕರು ಮನೆಯಲ್ಲಿಯೇ ಐಸ್ ಕ್ರೀಂ ತಯಾರಿಸಿ ಮಕ್ಕಳಿಗೆ ಕೊಡಬಹುದು. ಹೌದು, ಮಿಕ್ಸ್ ಫ್ರೂಟ್ ಐಸ್ ಕ್ರೀಮ್ ಮಾಡೋದು ಹೇಗೆ ಅಂತ ನೋಡ್ಕೊಳಿ;
ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂಗೆ ಬೇಕಾಗುವ ಸಾಮಗ್ರಿ:
ಒಂದು ಕಪ್ ಕಿತ್ತಳೆ ರಸ
ಒಂದು ಕಪ್ ಅನಾನಸ್ ರಸ
¾ ಕಪ್ ದಾಳಿಂಬೆ ರಸ
¾ ಕಪ್ ಆಪಲ್ ಜೂಸ್
¾ ಕಪ್ ದ್ರಾಕ್ಷಿ ರಸ
ಎರಡು ಕಪ್ ಹಾಲು
ನಿಂಬೆ ರಸ ಒಂದು ಚಮಚ
ಮಿಕ್ಸ್ ಫ್ರುಟ್ಸ್ ಐಸ್ ಕ್ರೀಂ ಮಾಡುವ ವಿಧಾನ:
ಕಿತ್ತಳೆ ರಸ, ಅನಾನಸ್ ರಸ, ದಾಳಿಂಬೆ ರಸ, ಆಪಲ್ ರಸ ಹಾಗೂ ದ್ರಾಕ್ಷಿ ರಸ, ನಿಂಬೆ ರಸವನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಒಂದು ಕಪ್ ರಸ ಅರ್ಧ ಕಪ್ ಆಗುವವರೆಗೆ ಕುದಿಸಿ.
ಕುದಿಸಿದ ರಸ ತಣ್ಣಗಾದ ನಂತರ, ಮೊದಲೆ ಕುದಿಸಿ ಆರಿಸಿದ ಹಾಲನ್ನು ಅದಕ್ಕೆ ಮಿಕ್ಸ್ ಮಾಡಿ, ನಂತರ ಆ ಮಿಶ್ರಣವನ್ನು ಫ್ರಿಜ್ ನಲ್ಲಿಡಿ. ಅದು ಸ್ವಲ್ಪ ಗಟ್ಟಿಯಾಗ್ತಾ ಇದ್ದಂತೆ, ಅದನ್ನು ತೆಗೆದು ಮತ್ತೆ ಮಿಕ್ಸಿ ಮಾಡಿ. ಮತ್ತೆ ಫ್ರಿಜ್ ನಲ್ಲಿಡಿ. ಇದು ಗಟ್ಟಿಯಾದ ನಂತರ ಸ್ಕ್ಯಾಬೆರಿ ಸಾಸ್ ಅಥವಾ ಚಾಕೊಲೇಟ್ ಸಾಸ್ ಹಾಕಿ ಮಕ್ಕಳಿಗೆ ಕೊಡಿ. ಸವಿಯಾದ ಮಿಕ್ಸ್ ಫ್ರೂಟ್ ಐಸ್ ಕ್ರೀಮ್ ಸವಿಯಲು ಸಿದ್ದ.