Do or Die Match: RCB v/s KKR, ಏನಾಗುತ್ತೆ RCB ಫ್ಲೇ ಆಫ್ ಭವಿಷ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಇಂದು ಮತ್ತೊಂದು ಕಠಿಣ ಪರೀಕ್ಷೆ ಎದುರಿಸಲಿದೆ. ಆರ್‌ಸಿಬಿ ಪ್ಲೇಆಫ್‌ಗೆ ಹೋಗುತ್ತಾ ? ಇಂದು ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಕೆಕೆಆರ್ ತಂಡದ ವಿರುದ್ಧ ಗೆದ್ದರೆ ಆರ್‌ಸಿಬಿಯ ಪ್ಲೇಆಫ್ ಭರವಸೆ ಹಾಗೆಯೇ ಉಳಿಯುತ್ತದೆ. ಆದರೆ ಆರ್‌ಸಿಬಿ ಗೆಲ್ಲಬಹುದೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಐಪಿಎಲ್ ಪಂದ್ಯಗಳ ಮತ್ತೊಂದು ದೊಡ್ಡ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ RCB ಮತ್ತು KKR ಮುಖಾಮುಖಿಯಾಗುತ್ತವೆ. ತಮ್ಮ ಕೊನೆಯ ಪಂದ್ಯವನ್ನು ಕಳೆದುಕೊಂಡಿದ್ದ ಕೆಕೆಆರ್‌ನ ಗೆಲುವಿನ ಸರಣಿಯಲ್ಲಿ ವಾಪಾಸ್ಸಾಗೊ ವಿಶ್ವಾಸ ಹೊಂದಿದ್ದಾರೆ.

ಐಪಿಎಲ್ ಸೀಸನ್ ಆರಂಭಿಸಿದ ಆರ್ ಸಿಬಿ ಸೋಲಿನ ಸುಳಿಗೆ ಸಿಲುಕಿದೆ. ಆರ್‌ಸಿಬಿ ಏಳು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಕುಸಿದಿದೆ.

ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಮತ್ತು ಕೆಕೆಆರ್ ಬ್ಯಾಟ್ಸ್‌ಮನ್‌ಗಳ ನಡುವೆ ಕದನ ನಡೆಯುವುದು ಖಚಿತವಾಗಿದೆ. RCB ಬೌಲರ್‌ಗಳು ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದರೆ, KKR ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನೊಂದಿಗೆ ಮಿಂಚುತ್ತಿದ್ದಾರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಸಹ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಉಪಯುಕ್ತವಾಗಿದೆ. ಹಾಗಾಗಿ ಇಂದಿನ ಪಂದ್ಯದ ಫಲಿತಾಂಶ ಆರ್‌ಸಿಬಿ ಬೌಲರ್‌ಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.

 

.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!