ಹೊಸದಿಗಂತ, ಮಂಗಳೂರು:
ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮಂಡ್ಯ ಮೂಲದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ತನಿಖೆಯ ಆಧಾರದಲ್ಲಿ ಮೃತಪಟ್ಟ ಯುವಕನನ್ನು ನಾಗೇಂದ್ರ (21) ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ವಿಧಾನ ಸೌಧದಲ್ಲಿ ಲಿಫ್ಟ್ ಆಪರೇಟರ್ ವೃತ್ತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ಐವರು ಸ್ನೇಹಿತರೊಂದಿಗೆ ನಾಗೇಂದ್ರ ಮಲ್ಪೆ ಬೀಚ್ಗೆ ಬಂದಿದ್ದು, ನೀರಿಗಿಳಿದ ವೇಳೆ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣವೇ ಸ್ಥಳೀಯ ಜೀವ ರಕ್ಷಕರು ನೀರಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರಾದರೂ ಆವೇಳೆಗಾಗಲೇ ನಾಗೇಂದ್ರ ಮೃತಪಟ್ಟಿದ್ದರು.