ನೇಹಾ ಹಿರೇಮಠ ಮರ್ಡರ್: ಪೋಸ್ಟ್‌ಮಾರ್ಟಂ ವರದಿ ಬಿಚ್ಚಿಟ್ಟಿದೆ ಇನ್ನಷ್ಟು ಬೆಚ್ಚಿಬೀಳಿಸುವ ಅಂಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರೀ ಚರ್ಚೆಗೆ ಕಾರಣವಾಗಿರುವ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಬಹಿರಂಗಗೊಂಡಿದೆ.

ನೇಹಾ ಮರಣೋತ್ತರ ಪರೀಕ್ಷೆ ವರದಿ ಹೊರಬಂದಿದ್ದು, ಹಂತಕ 9 ಬಾರಿಯಲ್ಲ ಬರೋಬ್ಬರಿ 14 ಬಾರಿ ಆಕೆಗೆ ಇರಿದಿರುವುದು ವರದಿಯಲ್ಲಿ ಬಯಲಾಗಿದೆ.

ನೇಹಾ ದೇಹದ ಮೇಲೆ ಒಟ್ಟು 14 ಗಾಯಗಳ ಗುರುತು ಪತ್ತೆಯಾಗಿದ್ದು, ಈ ಪೈಕಿ ಹಂತಕ ಹೃದಯದ ಭಾಗಕ್ಕೆ ಹಾಗೂ ಕುತ್ತಿಗೆಗೆ ಹಲವು ಬಾರಿ ಇರಿದ ಪರಿಣಾಮ ರಕ್ತನಾಳ ತುಂಡಾಗಿ ರಕ್ತಸ್ರಾವವಾಗಿದೆ ಎಂಬ ವಿಚಾರ ಈಗ ಬಯಲಾಗಿದೆ.

ಏ.18ರ ಗುರುವಾರ ಸಂಜೆ 4:45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿ ಫಯಾಜ್ ಚಾಕು ಹಿಡಿದು, ಮಾಸ್ಕ್ ಧರಿಸಿ ಕಾಲೇಜು ಕ್ಯಾಂಪಸ್‌ಗೆ ನುಗ್ಗಿ ಈ ಕೃತ್ಯ ನಡೆಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!