ದಿಗಂತ ವರದಿ ಹುಬ್ಬಳ್ಳಿ:
ಎರಡು ದ್ವಿಚಕ್ರ ವಾಹನಗಳ ನಡುವೆ ರವಿವಾರ ತಡರಾತ್ರಿ ಇಲ್ಲಿಯ ಕಿಮ್ಸ್ ಆಸ್ಪತ್ರೆ ಎದುರು ಅಪಘಾತವಾಗಿದ್ದು, ಇಬ್ಬರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾನೆ.
ರಾಮನಗರ ನಿವಾಸಿ ಆದಿತ್ಯಾ(17), ನಗರದ ರಾಹುಲ್ ಗಾಣಿಗೇರ(30) ಮೃತಪಟ್ಟಿದ್ದಾರೆ. ಕೇಶ್ವಾಪುರ ಸಂಜಯ ಆರ್. ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಉತ್ತರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.