ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಸುಪಾರಿ ಕೊಟ್ಟಿದ್ದೇ ʼಹಿರಿಮಗʼ

ಹೊಸದಿಗಂತ ವರದಿ ಗದಗ :

ಅವಳಿ‌ನಗರದಲ್ಲಿ ತಲ್ಲಣ ಮೂಡಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಮನೆಯ ಹಿರಿಯ ಮಗನೆ ಕೊಲೆಗೆ ಸುಪಾರಿ ನೀಡಿದ್ದು ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಈ ಪ್ರಕರಣದಲ್ಲಿ ಪ್ರಕಾಶ ಬಾಕಳೆ ಅವರ ಮೊದಲನೆಯ ಹೆಂಡತಿಯ ಮಗ ವಿನಾಯಕ ಪ್ರಕಾಶ ಬಾಕಳೆ ಸೇರಿದಂತೆ ಗದುಗಿನವರಾದ ಪೈರೋಜ್ ಖಾಜಿ,ಜಿಶಾನ್ ಖಾಜಿ ಮತ್ತು ಮಿರಜ್ ನವರಾದ ಸಾಹೀಲ್ ಖಾಜಿ,ಸೋಹಿಲ್ ಖಾಜಿ, ಸುಲ್ತಾನಾ ಶೇಖ,ಮಹೇಶ ಸಾಳೂಂಕೆ,ವಾಹೀದ್ ಬೇಪಾರಿ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.

ಈ ಪ್ರಕರಣ ಭೇದಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಡಿಜಿ ಮತ್ತು ಐಜಿಪಿರವರಾದ ಅಲೋಕ ಮೋಹನ ಅವರು 5 ಲಕ್ಷ ರೂಗಳನ್ನು ಘೋಷಿಸಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!