ಕಾಂಗ್ರೆಸ್‌ಗೆ ಮತ ಹಾಕಿ ಅಂದ್ರಾ ಧೋನಿ? ಪೋಸ್ಟ್‌ನಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ಧರಿಸಿರುವ ಮಹೇಂದ್ರ ಸಿಂಗ್ ಧೋನಿ ತಮ್ಮ ಎಡಗೈ ಬೆರಳನ್ನು ತೋರಿಸುತ್ತಾ ಮತ ಹಾಕಿರುವ ಗುರುತನ್ನು ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವಂತೆ ಕಾಣುತ್ತದೆ. ಇನ್ನೊಂದು ಕೈಯನ್ನು ಎತ್ತಿ ಐದೂ ಬೆರಳುಗಳನ್ನು ಪ್ರದರ್ಶನ  ಮಾಡುತ್ತಿದ್ದಾರೆ.

fact dhoni body 1

ಸತ್ಯಾಸತ್ಯತೆ ಪರಿಶೀಲನೆ ವೇಳೆ ಈ ಫೋಟೋ ಹಳೆಯದು ಎಂದು ಸಾಬೀತಾಗಿದೆ. ಜೊತೆಯಲ್ಲೇ ಧೋನಿ ಆರು ಬೆರಳುಗಳನ್ನ ತೋರಿಸುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ ಎಂದು ತೋರಿಸುವ ಸಲುವಾಗಿ ಎಂದು ಪತ್ತೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!