ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಯಾವುದೇ ಉಚ್ಚಾಟನೆಗೆ ಹೆದರಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಗೆ (BJP) ಹೋಗುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದಾರೆ.
ಬಿಜೆಪಿಯಿಂದ 6 ವರ್ಷ ಉಚ್ಚಾಟನೆ ಬೆನ್ನಲ್ಲೇ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪ, ಮಕ್ಕಳು ಆರಂಭದಿಂದ ಸುಳ್ಳು ಹೇಳುತ್ತಾ ಬಂದಿದ್ದಾರೆ. ಅವರು ಷಡ್ಯಂತ್ರ ಮಾಡುತ್ತಾ ಬಂದರು. ಅವರು ಯಾವ ಮುಖ ಇಟ್ಟುಕೊಂಡು ಉತ್ತರ ನೀಡುತ್ತಾರೆ. ಅವರು ಪ್ರಕ್ರಿಯೆ ನೀಡಲಿ, ನಂತರ ನಾನು ಅವರಿಗೆ ಉತ್ತರ ನೀಡುತ್ತೇನೆ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುತ್ತಾರೆ ಅಂದರು. ಬಳಿಕ ನಾಮಪತ್ರ ಹಾಕುವುದಿಲ್ಲ ಎಂದಿದ್ದರು. ದಿನಾಂಕ 19ನೇ ಶಾಕಿಂಗ್ ಅಂತಾ ಹೇಳಿದ್ದರು. ಇಂದು ನಾಮಪತ್ರ ವಾಪಸ್ಗೆ ಕಡೆ ದಿನ. ಇಂದು ನಾನು ಕಣದಲ್ಲಿದ್ದೇನೆ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಬೆಂಬಲವಿದೆ ಎಂದಿದ್ದಾರೆ.
ನಾನು ಐದು ಬಾರಿ ಕಮಲದ ಚಿಹ್ನೆಯಿಂದ ಸ್ಪರ್ಧೆ ಮಾಡಿದ್ದೇನೆ. ನನಗೆ ರೈತನ ಚಿಹ್ನೆ ಬಂದಿರುವುದು ಸಂತೋಷ ತಂದಿದೆ. ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನನಗೆ ಶೇ 60 ರಷ್ಟು ಬಿಜೆಪಿ ಬೆಂಬಲ ಇದೆ ಎಂದು ಹೇಳಿದ್ದಾರೆ.