EARTHQUAKE | ತೈವಾನ್​ನಲ್ಲಿ 24 ಗಂಟೆಯೊಳಗೆ 80ಕ್ಕೂ ಹೆಚ್ಚು ಬಾರಿ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೈವಾನ್‌ ಅಕ್ಷರಶಃ ಭೂಕಂಪಕ್ಕೆ ನಡುಗಿ ಹೋಗಿದೆ. 24 ಗಂಟೆಯೊಳಗೆ 80ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ.

Multiple earthquakes hit Taiwan's capital city, strongest reaching 6.3 magnitude - India Today6.3 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಸುಮಾರು 80ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ.

Earthquake today: Taiwan's Hualien hit by five quakes in nine minutes | Mintತೈವಾನ್‌ನಲ್ಲಿ ರಾತ್ರಿ 2:230ರ ಆಸುಪಾಸಿನಲ್ಲಿ ಎರಡು ಬಾರಿ ಪ್ರಬಲವಾದ ಭೂಕಂಪ ಸಂಭವಿಸಿದೆ. ಹುವಾಲಿಯನ್‌ನ ಪೂರ್ವ ಕೌಂಟಿಯಲ್ಲಿ ಭೂಮಿಯಿಂದ 5.5 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ ಎಂದು ತೈವಾನ್‌ನ ಹವಾಮಾನ ಇಲಾಖೆ ಹೇಳಿದೆ.

Taiwan rattled by series of quakes, including 6.3-magnitude tremorಭೂಕಂಪನದಿಂದಾಗಿ ಹುವಾಲಿಯನ್ ಪ್ರದೇಶದಲ್ಲಿ ಎರಡು ಕಟ್ಟಡಗಳಿಗೆ ಹಾನಿಯಾಗಿದೆ. ಈ ಪೈಕಿ ಒಂದು ಕಟ್ಟಡ ಕುಸಿದು ಬಿದ್ದಿದ್ದು, ಇನ್ನೊಂದು ರಸ್ತೆಗೆ ವಾಲಿದೆ. ತೈವಾನ್ ಜೊತೆಗೆ ಜಪಾನ್, ಚೀನಾ ಮತ್ತು ಫಿಲಿಪೈನ್ಸ್‌ನಲ್ಲಿಯೂ ಲಘು ಕಂಪನದ ಅನುಭವವಾಗಿದೆ. ಆದರೆ ಈವರೆಗೂ ಪ್ರಾಣಹಾನಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!