ಆಮ್ಲಜನಕ ಕೊರತೆ: ಬಾವಿ ಕೆಲಸಕ್ಕೆ ತೆರಳಿದ ಇಬ್ಬರು ಕಾರ್ಮಿಕರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಡಿಬಾಗಿಲಿನಲ್ಲಿ ಬಾವಿ ಕೆಲಸಕ್ಕೆ ಒಳಗೆ ತೆರಳಿದ ಇಬ್ಬರು ಕಾರ್ಮಿಕರಿಗೆ ಆಮ್ಲಜನಕದ ಕೊರತೆಯಾಗಿ ಮೃತ ಪಟ್ಟಿದ್ದಾರೆ.

ಕುಕ್ಕಿಲ ಮೂಲದ ಪರ್ತಿಪ್ಪಾಡಿ ನಿವಾಸಿ ಇಬ್ಬು ಯಾನೆ ಇಬ್ರಾಹಿಂ (೪೦), ಮಲಾರ್ ನಿವಾಸಿ ಆಲಿ (೨೪) ಮೃತ ವ್ಯಕ್ತಿಗಳಾಗಿದ್ದಾರೆ.

ಸುಮಾರು ೩೦ಅಡಿ ಆಳದ ಬಾವಿಗೆ ರಿಂಗ್ ಅಳವಡಿಸಿ ಕೊನೆಯ ಹಂತದಲ್ಲಿ ಸ್ವಚ್ಛತೆಯಾಗಿ ತಳಭಾಗಕ್ಕೆ ಇಳಿದ ಕಾರ್ಮಿಕ ಮೇಲೆ ಬರಲಾಗದಿರುವುದನ್ನು ಗಮನಿಸಿ ಇನ್ನೋರ್ವ ಇಳಿದಿದ್ದು, ಇಬ್ಬರೂ ಆಮ್ಲಜನಕದ ಕೊರತೆಯಿಂದ ಬಾವಿ ತಳ ಭಾಗದಲ್ಲಿ ಮೃತ ಪಟ್ಟಿದ್ದಾರೆ. ಇಬ್ರಾಹಿಂ ಸುಮಾರು ೨೦ ವರ್ಷದ ಪರಿಣತಿಯನ್ನು ಹೊಂದಿದ ಕಾರ್ಮಿಕ ಎನ್ನಲಾಗಿದೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಶವಗಳನ್ನು ವರ್ಗಾವಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!