ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಅಗಲಿಕೆಗೆ ನಾವು ತಯಾರಿರಲಿಲ್ಲ. ಕೊನೆ ಕ್ಷಣದವರೆಗೂ ಭರವಸೆಯಲ್ಲೇ ಇದ್ದೆವು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷವರ್ಧನ್ ಹೇಳಿದ್ದಾರೆ.
ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿದ್ದೆವು, ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿತ್ತು. ಆದರೆ ಉಸಿರಾಟದ ತೊಂದರೆ ಇತ್ತು. ಹೀಗಾಗಿ ಮೂರು ದಿನದ ಹಿಂದೆ ವೆಂಟಿಲೇಟರ್ನಲ್ಲಿ ಇಡಬೇಕಾಗಿತ್ತು. ಮಣಿಪಾಲ್ ಆಸ್ಪತ್ರೆ ವೈದ್ಯರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಕಾರ್ಡಿಯಾಕ್ ಅರೆಸ್ಟ್ ಆಗಿ ರಾತ್ರಿ 1:30ರ ಸುಮಾರಿಗೆ ನಿಧನ ಹೊಂದಿದರು ಎಂದಿದ್ದಾರೆ.
ಅವರಿಗೆ ಮಂಡಿನೋವು ಏನೂ ಇರಲಿಲ್ಲ.ಕಾಲಿಗೆ ಒಂದು ಗಾಯವಾಗಿತ್ತು. ಅದಕ್ಕೆ ಮೈಸೂರಿನ ಮಣಿಪಾಲ್ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅದು ಸರಿಯಾಗಿ ವಾಸಿಯಾಗಿರಲಿಲ್ಲ. ಮತ್ತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. 11 ವರ್ಷಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಆಗಿತ್ತು. ಬಿಪಿ, ಶುಗರ್ ಎಲ್ಲ ಮೊದಲಿನಿಂದಲೂ ಇತ್ತು. ನಿನ್ನೆ 3-4 ದಿನದ ಹಿಂದೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ತೀರ ಅಸ್ವಸ್ಥರಾದಂತೆ ಆದರು. ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಸ್ವಲ್ಪ ಸುಧಾರಣೆ ಕಂಡರೂ ರಾತ್ರಿ 10 ಗಂಟೆಯಿಂದ ಉಸಿರಾಡುವುದು ಕಷ್ಟವಾಯಿತು. ಹೀಗಾಗಿ ಕಾರ್ಡಿಯಾಕ್ ಅರೆಸ್ಟ್ ಆಗಿ ಕೊನೆಯುಸಿರೆಳೆದರು ಎಂದು ಹೇಳುತ್ತಾ ಹರ್ಷವರ್ಧನ್ ಭಾವುಕರಾಗಿದ್ದಾರೆ.