ನಾನು ಸತ್ತಾಗ ಕಣ್ಣೀರ ವಿದಾಯ ಬೇಡ, ನಗುವಿನ ಬೀಳ್ಕೊಡುಗೆ ನೀಡಿ ಎಂದಿದ್ರು ಶ್ರೀನಿವಾಸ್‌ ಪ್ರಸಾದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ತಂದೆ ಒಂದು ಸಾರ್ಥಕ ಜೀವನ ಕಂಡಿದ್ದಾರೆ. ಸದಾ ನಗುತ್ತಲೇ ಇದ್ದ ಅಪ್ಪ ನಾನು ಸತ್ತಾಗ ಕಣ್ಣೀರಿನ ವಿದಾಯ ಬೇಡ, ನಗುವಿನ ಬೀಳ್ಕೊಡುಗೆ ಕೊಡಿ ಎಂದು ಹೇಳುತ್ತಿದ್ದರು ಎಂದು ಶ್ರೀನಿವಾಸ್‌ ಪ್ರಸಾದ್‌ ಪುತ್ರಿ ಪ್ರತಿಮಾ ಪ್ರಸಾದ್‌ ಹೇಳಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ಆಗದಂತೆ ನಮ್ಮ ತಂದೆಯನ್ನ ಸಂತೋಷದಿಂದ ಬಿಳ್ಕೋಡೋಣ. ಇತ್ತೀಚಿನ ದಿನಗಳಲ್ಲಿ ತಂದೆಯ ಆರೋಗ್ಯ ಗಂಭೀರವಾಗಿತ್ತು. ಎಲ್ಲಾ ವೈದ್ಯರು ಅವರನ್ನ ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಇಂದು ಪ್ರಯತ್ನ ಕೈಗೂಡದೆ ನಮ್ಮನ್ನು ಅಗಲಿದ್ದಾರೆ.

ಇಂದು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ಅಂತಿಮ ದರುಶನಕಕ್ಕೆ ಇರಿಸಲಾಗುತ್ತೆ.ಸ್ವಲ್ಪ ಸಮಯದ ನಂತರ ಸಾರ್ವಜನಿಕ ಸ್ಥಳದಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!