ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ತೃಣಮೂಲ ಕಾಂಗ್ರೆಸ್ಗೆ ಮತ ಹಾಕುವುದಕ್ಕಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ ಎಂದು ಹೇಳಿದ್ದಾರೆ.
ಇದೀಗ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಪಶ್ಚಿಮ ಬಂಗಾಳ (West Benagl) ಬೆಹರಂಪುರ ರ್ಯಾಲಿ ಉದ್ದೇಶಿಸಿ ಮಾತಾಡಿದ ಅಧೀರ್ ರಂಜನ್ ಚೌಧರಿ, ಟಿಎಂಸಿಗೆ (TMC) ಯಾಕೆ ವೋಟ್ ಹಾಕುತ್ತೀರಿ. ಅದಕ್ಕಿಂತ ಬಿಜೆಪಿಗೆ (BJP) ವೋಟ್ ಹಾಕೋದು ಉತ್ತಮ ಎಂದು ಹೇಳಿದ್ದಾರೆ
ಬಿಜೆಪಿ ನಾಯಕ ಶೆಹಜಾದ್ ಪೂನವಾಲ ಅವರು ಅಧೀರ್ ರಂಜನ್ ಹೇಳಿಕೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಟಿಎಂಸಿಗೆ ನೀಡಿದ ಯಾವುದೇ ಮತವು ಪಶ್ಚಿಮ ಬಂಗಾಳಕ್ಕೆ ಹಾನಿ ಉಂಟುಮಾಡುತ್ತದೆ ಎನ್ನುವುದು ಕಾಂಗ್ರೆಸ್ ನಾಯಕನಿಗೂ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ.
ಆದರೆ, ಅಧೀರ್ ರಂಜನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ನಾನು ಇನ್ನೂ ವೀಡಿಯೊವನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಅಧೀರ್ ರಂಜನ್ ಚೌಧರಿ, ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಮತ್ತು ಬಹರಂಪುರ ಲೋಕಸಭಾ ಅಭ್ಯರ್ಥಿ ಆಗಿದ್ದು, ಈ ಚುನಾವಣೆಯು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಒತ್ತಿ ಹೇಳಿದ್ದಲ್ಲದೆ, ಜಾತ್ಯತೀತ ಶಕ್ತಿಗಳಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.
ಕಾಂಗ್ರೆಸ್ ಮತ್ತು ಎಡಪಕ್ಷಗಳು ಗೆಲ್ಲುವುದು ಅವಶ್ಯಕ. ಇಲ್ಲದೇ ಹೋದರೆ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ. ಟಿಎಂಸಿಗೆ ಮತ ಹಾಕುವುದು ಎಂದರೆ ಬಿಜೆಪಿಗೆ ಮತ ಹಾಕಿದಂತೆ.ಇಂಥ ಅನಿವಾರ್ಯತೆ ಬಂದಲ್ಲಿ, ಬಿಜೆಪಿಗೆ ಮಾತ್ರ ಮತ ಹಾಕುವುದು ಉತ್ತಮ. ಬಿಜೆಪಿಗೆ ಮತ ಹಾಕಬೇಡಿ, ಟಿಎಂಸಿಗೆ ಮತ ಹಾಕಬೇಡಿ ಎಂದು ಚೌಧರಿ ಬಂಗಾಳಿ ಭಾಷಣದಲ್ಲಿ ಹೇಳಿದರು.
#WATCH | Murshidabad, West Bengal: State Congress president Adhir Ranjan Chowdhury says, "This time '400 paar' won't happen…100 seats have already slipped away from the hands of PM Modi…It is necessary to make Congress and CPI(M) win. If Congress and CPI(M) don't win,… pic.twitter.com/kzyywkAZIS
— ANI (@ANI) May 1, 2024
ಟಿಎಂಸಿ ನಾಯಕಿ ಸುಷ್ಮಿತಾ ದೇವ್ ಅಧೀರ್ ರಂಜನ್ ವಿಡಿಯೋ ಹಂಚಿಕೊಂಡು, ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಎಂದು ಎಂದು ಲೇವಡಿ ಮಾಡಿದ್ದಾರೆ.
NAMMORU NAMAGE HOONA KUNTE TTU HOLAKKE HOONA EMBA GADE MATIDE AFU ILLI SATYADA PARAVAGI KELASA MADIDE TMC geluvininda rajyakke andare pashima bangalakke yavude reetiya anukoola vagutulla vemba MATANNU dhrudeekarisalagide